Ad Widget .

ಕಾರ್ಕಳದಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿಲ್ಲ| ಉಡುಪಿ ಪಶ್ಚಿಮ ವಲಯ ಐಜಿಪಿ ಸ್ಪಷ್ಟನೆ

ಸಮಗ್ರ ನ್ಯೂಸ್: ಕಾರ್ಕಳದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿಲ್ಲ ಎಂದು ಉಡುಪಿ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.

Ad Widget . Ad Widget .

ಹಿಂದೂ ಯುವತಿಯನ್ನು ಕೇವಲ 3 ತಿಂಗಳಲ್ಲಿ ಪುಸಲಾಯಿಸಿದ ಆರೋಪಿ ಅಲ್ತಾಫ್ ಹಾಗೂ ಯುವಕರಿಬ್ಬರು, ಕಾರಿನಲ್ಲಿ ಪಾರ್ಟಿ ಮಾಡುವುದಾಗಿ ಕರೆದೊಯ್ದು ಬಿಯರ್‌ನಲ್ಲಿ ಡ್ರಗ್ಸ್ ಮಿಶ್ರಣ ಮಾಡಿ ಕೊಟ್ಟು ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಮಾಡಿದ್ದಾರೆ. ಇದರಲ್ಲಿ ಯುವಕ ಅಲ್ತಾಫ್ ಅತ್ಯಾಚಾರ ಮಾಡಿದ್ದು, ಇದು ಗ್ಯಾಂಗ್ ರೇಪ್ ಅಲ್ಲವೆಂದು ಉಡುಪಿ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಹೇಳಿದ್ದಾರೆ.

Ad Widget . Ad Widget .

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗ ಅತ್ಯಾಚಾರ ಸಂತ್ರಸ್ತೆಯಾಗಿರುವ ಯುವತಿಗೂ ಅತ್ಯಾಚಾರ ಮಾಡಿದ ಯುವಕನಿಗೂ ಪರಸ್ಪರ ಮೂರು ತಿಂಗಳಿಂದ ಇನ್ ಸ್ಟ್ರಾಗ್ರಾಂ ನಲ್ಲಿ ಪರಿಚಯ ಇತ್ತು. ಆದರೆ, ಸಂತ್ರಸ್ತೆಯ ತಂದೆಯ ಜೊತೆ ಆರೋಪಿಗೆ ಹಲವು ವರ್ಷಗಳ ಪರಿಚಯ ಇತ್ತು. ಇನ್ನು ತಂದೆಗೆ ಆರೋಪಿ ಪರಿಚಯ ಇದ್ದ ಕಾರಣ, ಯುವತಿ ಇನ್‌ಸ್ಟಾಗ್ರಾಮ್‌ ಮೂಲಕ ಪರಿಚಯವಾಗಿದ್ದ ಆರೋಪಿಯ ಕಾರಿನಲ್ಲಿ ಬರಲು ಒಪ್ಪಿಕೊಂಡಿದ್ದಳು. ಆದರೆ, ಆತನ ಇಬ್ಬರು ಸ್ನೇಹಿತರು ಬಂದು ಬಿಯರ್ ಕೊಟ್ಟಿದ್ದರು.

ಯುವತಿಗೆ ಬಿಯರ್ ಕೊಡುವ ಮೊದಲೇ ಅದರಲ್ಲಿ ಡ್ರಗ್ಸ್ ಮಿಶ್ರಣ ಮಾಡಿ ಕೊಡಲಾಗಿದೆ. ಇದರಿಂದ ಬಿಯರ್ ಸೇವನೆ ಮಾಡುತ್ತಿದ್ದಂತೆಯೇ ಯುವತಿ ಮೂರ್ಚೆ ಹೋಗಿದ್ದಾಳೆ. ನಂತರ ಆಕೆ ಅಮಲಿನಲ್ಲಿರುವುದನ್ನು ದುರ್ಬಳಕೆ ಮಾಡಿಕೊಂಡ ಆರೋಪಿ ಅತ್ಯಾಚಾರ ಮಾಡಿದ್ದಾರೆ. ಆಕೆಯನ್ನು ಮನೆಗೆ ತಲುಪಿಸಿದಾಗ ಯುವತಿಯ ಸ್ಥಿತಿಯನ್ನು ನೋಡಿದ ಮನೆಯವರು ಕೂಡಲೇ ವಿಚಾರಣೆ ಮಾಡಿದಾಗ ಘಟನೆ ಬಗ್ಗೆ ಬಾಯಿ ಬಿಟ್ಟಿದ್ದಾಳೆ.

ಕೂಡಲೇ ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಚಿಕಿತ್ಸೆ ನೀಡುವ ಮುಂಚೆ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಅತ್ಯಾಚಾರ ದೂರು ದಾಖಲಿಸಿದ್ದಾರೆ. ಅತ್ಯಾಚಾರ ಮಾಡಲು ಆತನಿಗೆ ಇಬ್ಬರು ಬಿಯರ್ ತಂದುಕೊಡಲು ಸಹಕಾರ ನೀಡಿದ್ದಾರೆ ಎಂಬುದು ಗೊತ್ತಾಗಿದೆ.

ಆದರೆ, ಆತನೊಂದಿಗೆ ಕಾರಿನಲ್ಲಿ ಬೇರೆ ಯಾರಾದರೂ ಹೋಗಿದ್ದರಾ, ಅತ್ಯಾಚಾರ ಮಾಡಿದ್ದರಾ ಎಂಬುದರ ಬಗ್ಗೆ ತನಿಖೆಯಿಂದ ಗೊತ್ತಾಗಬೇಕು. ಇನ್ನು ಎಫ್‌ಐಆರ್ ಪ್ರಕಾರ ಇದು ಗ್ಯಾಂಗ್ ರೇಪ್ ಅನಿಸುವುದಿಲ್ಲ. ಅತ್ಯಾಚಾರ ಪ್ರಕರಣದ ಬಗ್ಗೆ ದೂರು ಬಂದಿದೆ. ಸಂತ್ರಸ್ತೆ ಈಗ ಹೇಳಿಕೆ ಕೊಡುವ ಸ್ಥಿತಿಯಲ್ಲಿ ಇಲ್ಲ. ಆಕೆಯ ಹೇಳಿಕೆ ಬಂದ ನಂತರ ಪೂರ್ಣವಿವರ ತಿಳಿಯಬಹುದು ಎಂದಿದ್ದಾರೆ.

Leave a Comment

Your email address will not be published. Required fields are marked *