Ad Widget .

ಮೂಡುಬಿದಿರೆ: ಅಪ್ರಾಪ್ತೆ ಮಗಳನ್ನೇ ಗರ್ಭಿಣಿಯನ್ನಾಗಿಸಿದ ತಂದೆ| ಪೋಕ್ಸೊ ಕೇಸು ದಾಖಲು

ಸಮಗ್ರ ನ್ಯೂಸ್: ಅಪ್ರಾಪ್ತ ವಯಸ್ಸಿನ ಸ್ವಂತ ಮಗಳ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಗರ್ಭಿಣಿಯಾಗಿಸಿದ ಆರೋಪದ ಮೇರೆಗೆ ವಿಕೃಕಾಮಿ ತಂದೆಯೊಬ್ಬನನ್ನು ಮೂಡುಬಿದಿರೆ ಪೋಲಿಸರು ಬಂಧಿಸಿ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ.

Ad Widget . Ad Widget .

55 ವರ್ಷ ಪ್ರಾಯದ ಕೂಲಿ ಕಾರ್ಮಿಕ ಬಂಧಿತನಾಗಿದ್ದು, ಈತ ಪ್ರೌಢಶಾಲೆಯಲ್ಲಿ ಓದುತ್ತಿರುವ ಮಗಳ ಮೇಲೆ ಆರು ತಿಂಗಳ ಹಿಂದೆ ಮನೆಯಲ್ಲೆ ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ. ಇತ್ತೀಚೆಗೆ ಆಕೆಯ ಆರೋಗ್ಯದಲ್ಲಿ ಏರುಪೇರು ಉಂಟಾದಾಗ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ಕರೆದೊಯ್ದಿದ್ದ. ಅಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಮಗಳು 6 ತಿಂಗಳ ಗರ್ಭಿಣಿಯಾಗಿರುವುದು ತಿಳಿದುಬಂದಿದೆ.

Ad Widget . Ad Widget .

ಈ ಬಗ್ಗೆ ಬಾಲಕಿಯ ತಂದೆಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಆರಂಭದಲ್ಲಿ ಬೇರೆಯವರ ಹೆಸರು ಹೇಳಿದ್ದನೆನ್ನಲಾಗಿದೆ. ಹೆಚ್ಚಿನ ವಿಚಾರಣೆ ನಡೆಸಿದಾಗ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪೊಕ್ಸೊ ಪ್ರಕರಣ ದಾಖಲಾಗಿದೆ. ಆರೋಪಿ ಮೂಲತಃ ಕಾರ್ಕಳದವನಾಗಿದ್ದು ದಶಕಗಳ ಹಿಂದೆ ಮೂಡುಬಿದಿರೆ ತಾಲೂಕಿನ ಗ್ರಾಮವೊಂದರ ಸರಕಾರಿ ಜಾಗದಲ್ಲಿ ಮನೆ ಕಟ್ಟಿ ನೆಲೆಸಿದ್ದ.

Leave a Comment

Your email address will not be published. Required fields are marked *