Ad Widget .

ಕುಕ್ಕೆ ಸುಬ್ರಹ್ಮಣ್ಯ: KSS ಕಾಲೇಜಿನಲ್ಲಿ ಮಾದ್ಯಮ ಸಂವಾದ| ಆಧುನಿಕ ಯುಗದಲ್ಲಿ ಮಾಧ್ಯಮದ ಪಾತ್ರ ಮಹತ್ತರ – ನಾಯರ್ ಕೆರೆ

ಸಮಗ್ರ ನ್ಯೂಸ್: ಆಂತರಿಕ ಗುಣಮಟ್ಟದ ಭರವಸೆ ಕೋಶ ಹಾಗೂ ಪ್ರೆಸ್ ಮತ್ತು ಪಬ್ಲಿಸಿಟಿ ಸೆಲ್ ಇದರ ವತಿಯಿಂದ ಮಾಧ್ಯಮ ಸಂವಾದ ಕಾರ್ಯಕ್ರಮವು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕಾಲೇಜಿನಲ್ಲಿ ಆ.23ರಂದು ನಡೆಯಿತು.

Ad Widget . Ad Widget .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ.ದಿನೇಶ್ ಪಿ.ಟಿ ವಹಿಸಿದ್ದರು. ಪತ್ರಕರ್ತ ದುರ್ಗಾ ಕುಮಾರ್ ನಾಯರ್ ಕೆರೆ, ಮಾಧ್ಯಮ ಅನ್ನುವುದು ಬದುಕಿಗೆ ಕೈಗನ್ನಡಿ. ಜನತೆಗೆ ಬೇಕಾದ ಮಹತ್ವದ ಜ್ಞಾನವನ್ನು ನೀಡುತ್ತದೆ, ಸಾಮಾಜಿಕ ದೃಷ್ಟಿಕೋನ ಇರಿಸಿಕೊಂಡು ಜನತೆಯ ಹಿತಕ್ಕಾಗಿ ಪತ್ರಿಕೆಗಳು ಅನನ್ಯ ಕಾರ್ಯವನ್ನು ನಿರ್ವಹಿಸುತ್ತಾ ಬಂದಿದೆ. ಆಧುನಿಕ ಯುಗದಲ್ಲಿ ನಮಗೆ ಕಡತಗಳು ಅನಿವಾರ್ಯ ಪತ್ರಿಕೆಗಳು ಕಡತವಾಗಿ ಜನತೆಗೆ ಪೂರಕವಾಗಿ ಸಹಕಾರ ನೀಡುತ್ತದೆ ಎಂದು ಹೇಳಿದರು.

Ad Widget . Ad Widget .

ಪತ್ರಕರ್ತರಾದ ಬಾಲಕೃಷ್ಣ ಭೀಮಗುಳಿ, ಲೋಕೇಶ್ ಬಿ.ಎನ್, ರತ್ನಾಕರ ಸುಬ್ರಹ್ಮಣ್ಯ, ದಯಾನಂದ ಕಲ್ನಾರ್, ಸಂತೋಷ್ ಕುಮಾರ್, ಶಿವ ಭಟ್ ಕಾಂಚನ, ಪ್ರಶಾಂತ್ ನೆಲ್ಯಾಡಿ, ಯತೀಶ್ ನೆಲ್ಯಾಡಿ, ಅನನ್ಯಾ ಕಾಟೂರು, ಗೋಪಿಚಂದನ್ ಕೆ.ಎಸ್ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನೆರವೇರಿತು.

ಉಪನ್ಯಾಸಕರುಗಳಾದ ಲತಾ.ಬಿ.ಟಿ, ಸುಮಿತ್ರಾ, ಪುಷ್ಪಾ, ಪ್ರಮೀಳಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕಿ ಸುಮಿತ್ರಾ ಸ್ವಾಗತಿಸಿ, ಉಪನ್ಯಾಸಕಿ ಪುಷ್ಪಾ ಡಿ. ವಂದಿಸಿದರು. ವಿದ್ಯಾರ್ಥಿನಿ ಕಲ್ಪನಾ ವೈ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *