Ad Widget .

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ| ಪೊಲೀಸರ ಚಾರ್ಜ್ ಶೀಟ್ ನಲ್ಲಿ ಎಚ್.ಡಿ ರೇವಣ್ಣ ಹಾಗೂ ಪ್ರಜ್ವಲ್ ಕಾಮಪುರಾಣ ಬಯಲು

ಸಮಗ್ರ ನ್ಯೂಸ್: ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎಚ್ ಡಿ ರೇವಣ್ಣ ಮತ್ತು ಮಗ ಪ್ರಜ್ವಲ್ ರೇವಣ್ಣ ರಾಸಲೀಲೆಗಳು ಈಗ ಪೊಲೀಸರು ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ.

Ad Widget . Ad Widget .

ಪ್ರಜ್ವಲ್ ಬಸವನಗುಡಿಯ ಮನೆಯಲ್ಲಿ ದೂರುದಾರ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿರುವುದು ನಿಜ ಎಂದು ಚಾರ್ಜ್ ಶೀಟ್ ನಲ್ಲಿ ಹೇಳಲಾಗಿದೆ. ಇನ್ನು ಎಚ್ ಡಿ ರೇವಣ್ಣ ಹಣ್ಣು ಕೊಡುವ ನೆಪದಲ್ಲಿ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದರು ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರೇವಣ್ಣ ಈಗ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ, ಪ್ರಜ್ವಲ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಎಸ್ ಐಟಿ ಅಧಿಕಾರಿಗಳು ಒಟ್ಟು 2144 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. 150 ಸಾಕ್ಷಿಗಳ ಉಲ್ಲೇಖ ಮಾಡಲಾಗಿದೆ.

Ad Widget . Ad Widget .

ಚಾರ್ಜ್ ಶೀಟ್ ನಲ್ಲಿ ಪ್ರಜ್ವಲ್ ಬಗ್ಗೆ ಏನೇನಿದೆ?
ಬೆಂಗಳೂರಿನ ಮನೆಯಲ್ಲಿ ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆಸಿ ಪ್ರಜ್ವಲ್ ರೇವಣ್ಣ ವಿಡಿಯೋ ಮಾಡಿಕೊಂಡಿದ್ದರು. ಸಂತ್ರಸ್ತೆಯ ಹೊಟ್ಟೆ ಹಿಸುಕುವುದು, ತಬ್ಬಿಕೊಳ್ಳುವುದು ಮಾಡುತ್ತಿದ್ದ. ಹೇಳಿದ್ದು ಕೇಳದೇ ಇದ್ದರೆ ಕಥೆ ಮುಗಿಸುವುದಾಗಿ ಬೆದರಿಕೆ ಹಾಕುತ್ತಿದ್ದ. ಸಂತ್ರಸ್ತೆಯ ಮಗಳಿಗೂ ವಿಡಿಯೋ ಕಾಲ್ ಮಾಡಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಸಂತ್ರಸ್ತೆಯ ಮಗಳಿಗೆ ಕರೆ ಮಾಡಿ ಎದೆ ಭಾಗ ತೋರಿಸುವಂತೆ ಒತ್ತಾಯಿಸಿದ್ದ. ಒಪ್ಪದೇ ಇದ್ದಾಗ ನೀನು ನನ್ನ ಜೊತೆ ಸಂಬಂಧವಿಟ್ಟುಕೊಂಡಿದ್ದೀಯಾ ಎಂದು ತಾಯಿ ಮತ್ತು ಮನೆಯವರಿಗೆ ಹೇಳುವುದಾಗಿ ಬೆದರಿಕೆ ಹಾಕಿದ್ದ. ಇದರಿಂದ ಆತಂಕಗೊಂಡ ಆಕೆ ಖಾಸಗಿ ಭಾಗವನ್ನು ತೋರಿಸಿದ್ದಳು. ಇದನ್ನು ಸ್ಕ್ರೀನ್ ಶಾಟ್ ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಪ್ರಜ್ವಲ್ ಹರಿಯಬಿಟ್ಟಿದ್ದ.

ಹೊಳೆನರಸೀಪುರದ ಮನೆಯ ಮೊದಲ ಮಹಡಿಯಲ್ಲಿ ಮನೆಗೆಲಸದಾಕೆ ಕೆಲಸ ಮಾಡುತ್ತಿದ್ದಾಗ ಆಕೆಯ ಸೆರಗು ಎಳೆಯುತ್ತಿದ್ದ ಪ್ರಜ್ವಲ್ ತಬ್ಬಿಕೊಳ್ಳುವುದು ಮಾಡುತ್ತಿದ್ದ. 2020 ರಲ್ಲಿ ಬಸವನಗುಡಿ ಮನೆಯ ಸ್ವಚ್ಛತೆ ಮಾಡುವ ನೆಪದಲ್ಲಿ ಆಕೆಯನ್ನು ಕರೆದೊಯ್ದು ಅತ್ಯಾಚಾರ ಮಾಡಿದ್ದ. ಬೆಳಿಗ್ಗೆ 10.30 ರ ವೇಳೆಗೆ ಭವಾನಿ ರೇವಣ್ಣ ವಾಕಿಂಗ್ ಹೋಗಿದ್ದಾಗ ಕೃತ್ಯವೆಸಗಿದ್ದ. ಸಂತ್ರಸ್ತೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ರೂಂ ಲಾಕ್ ಮಾಡಿಕೊಂಡಿದ್ದ. ಬಳಿಕ ಈಗ ನಡೆದಿರುವ ವಿಚಾರ ಬೇರೆಯವರಿಗೆ ಹೇಳಿದರೆ ನಿನ್ನ ಗಂಡನನ್ನು ಜೈಲಿಗೆ ಹಾಕಿಸುತ್ತೇನೆ, ನಿನ್ನ ಮಗಳಿಗೂ ನಿನಗೆ ಆದ ಗತಿಯನ್ನೇ ತೋರಿಸುತ್ತೇನೆ, ನಿನ್ನನ್ನು ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ. ಇದೇ ರೀತಿ ಹಲವು ಮಹಿಳೆಯರ ವಿಡಿಯೋ ಮಾಡಿಕೊಂಡಿದ್ದ.

ಎಚ್ ಡಿ ರೇವಣ್ಣ ಏನು ಮಾಡ್ತಿದ್ದರು?
ತಂದೆ ಎಚ್ ಡಿ ರೇವಣ್ಣ ಕೂಡಾ ಮನೆಗೆಲಸದಾಕೆಯ ಮೇಲೆ ಕಣ್ಣು ಹಾಕಿದ್ದರು. ಪತ್ನಿ ಭವಾನಿ ರೇವಣ್ಣ ಇಲ್ಲದ ಸಮಯ ನೋಡಿಕೊಂಡು ಕೊಠಡಿಗೆ ಹಣ್ಣು ಕೊಡುವ ನೆಪದಲ್ಲಿ ರೇವಣ್ಣ ಮನೆಕೆಲಸದಾಕೆಯನ್ನು ಕರೆಯುತ್ತಿದ್ದರು. ರೂಮಿಗೆ ಕರೆದು ಬೇಕೆಂದೇ ಕೈ ಹಿಡಿದೆಳೆಯುವುದು, ಅಸಭ್ಯವಾಗಿ ಸ್ಪರ್ಶಿಸುವುದು ಮಾಡುತ್ತಿದ್ದರು. ಅಲ್ಲಿಂದ ಜಾಗ ಖಾಲಿ ಮಾಡಲು ನೋಡಿದರೆ ನಾನೇನು ಮಾಡಲ್ಲ ಬಾ ಎಂದು ಸಂತ್ರಸ್ತೆಯ ಕೈ ಹಿಡಿದೆಳೆಯುತ್ತಿದ್ದರು.

Leave a Comment

Your email address will not be published. Required fields are marked *