Ad Widget .

ಹೊಸ ಪಕ್ಷದ ಧ್ವಜ ಬಿಡುಗಡೆ ಮಾಡಿದ ದಳಪತಿ ವಿಜಯ್‌

ಸಮಗ್ರ ನ್ಯೂಸ್: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ವಿಜಯ್ ಅವರು ತಮ್ಮ ರಾಜಕೀಯ ಪಕ್ಷವಾದ ತಮಿಳಗ ವೆಟ್ರಿ ಕಳಗಂನ ಧ್ವಜ ಮತ್ತು ಚಿಹ್ನೆಯನ್ನು ಇಂದು ಅನಾವರಣಗೊಳಿಸಿದ್ದಾರೆ. ಮೆರೂನ್ (ಕೆಂಗಂದು) ಮತ್ತು ಹಳದಿ ಬಣ್ಣವಿರುವ ಧ್ವಜದ ಮಧ್ಯದಲ್ಲಿ ಎರಡು ಆನೆಗಳು ಮತ್ತು ನಕ್ಷತ್ರಗಳಿಂದ ಸುತ್ತುವರಿದ ನವಿಲಿನ ಗುರುತು ಇದೆ. ಈ ಧ್ವಜವನ್ನು ಪನೈಯೂರ್ ಪಕ್ಷದ ಕಚೇರಿಯಲ್ಲಿ ವಿಜಯ್ ಧ್ವಜಾರೋಹಣ ಮಾಡಿ ಬಳಿಕ ರಾಜಕೀಯ ಪಕ್ಷದ ಅಧಿಕೃತ ಹಾಡನ್ನು ಬಿಡುಗಡೆ ಮಾಡಲಿದ್ದಾರೆ.

Ad Widget . Ad Widget .

ಫೆಬ್ರವರಿಯಲ್ಲಿ ವಿಜಯ್ ಅವರು ತಮಿಳಗ ವೆಟ್ರಿ ಕಳಗಂ ಪಕ್ಷವನ್ನು ಪ್ರಾರಂಭಿಸುವುದಾಗಿ ಘೋಷಿಸಿ, ತಮಿಳುನಾಡಿನಲ್ಲಿ 2026ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದರು. ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಅವರ ಪಕ್ಷವು ಯಾವುದೇ ರಾಜಕೀಯ ಬಣದೊಂದಿಗೆ ಹೊಂದಾಣಿಕೆ ಮಾಡಿಕೊಂಡಿರಲಿಲ್ಲ. ಪಕ್ಷದ ಧ್ವಜ ಮತ್ತು ಚಿಹ್ನೆಯನ್ನು ಅನಾವರಣಗೊಳಿಸಿದ ಬಳಿಕ ಮಾತನಾಡಿದ ವಿಜಯ್, ನೀವೆಲ್ಲರೂ ನಮ್ಮ ಮೊದಲ ರಾಜ್ಯ ಸಮ್ಮೇಳನಕ್ಕಾಗಿ ಕಾಯುತ್ತಿದ್ದೀರಿ ಎಂದು ನನಗೆ ತಿಳಿದಿದೆ. ಅದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ ಮತ್ತು ಶೀಘ್ರದಲ್ಲೇ ನಾನು ಅದನ್ನು ಘೋಷಿಸುತ್ತೇನೆ. ಅದಕ್ಕೂ ಮೊದಲು ನಾನು ಇಂದು ನಮ್ಮ ಪಕ್ಷದ ಧ್ವಜವನ್ನು ಅನಾವರಣ ಮಾಡಿದ್ದೇನೆ. ನನಗೆ ತುಂಬಾ ಹೆಮ್ಮೆ ಅನಿಸುತ್ತದೆ. ತಮಿಳುನಾಡಿನ ಅಭಿವೃದ್ಧಿಗೆ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

Ad Widget . Ad Widget .

Leave a Comment

Your email address will not be published. Required fields are marked *