Ad Widget .

ದರ್ಶನ್ ಭೇಟಿಯಾದ ರಚಿತಾ ರಾಮ್… ಭಾವುಕರಾದ ರಚ್ಚುಗೆ ದಚ್ಚು ಸಾಂತ್ವನ..!

ಸಮಗ್ರ ನ್ಯೂಸ್: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್‌ ಅವರನ್ನು ನೋಡಲು ಇಂದು ಪರಪ್ಪನ ಅಗ್ರಹಾರ ಜೈಲಿಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಭೇಟಿ ಕೊಟ್ಟಿದ್ದಾರೆ.

Ad Widget . Ad Widget .

ಇತ್ತೀಚೆಗಷ್ಟೇ ನನ್ನ ಗುರು ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದ ರಚಿತಾರಾಮ್‌ ಇಂದು ಮಧ್ಯಾಹ್ನ ಮೂರು ಗಂಟೆ ನಂತರ ದರ್ಶನ್ ಆಪ್ತ ಸಚ್ಚಿದಾನಂದ್ ಜೊತೆಗೆ ಜೈಲಿಗೆ ಆಗಮಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ರಾಜನನ್ನ ರಾಜನ ರೀತಿ ನೋಡೋಕೆ ನನಗಿಷ್ಟ, ಈ ರೀತಿಯಲ್ಲಿ ನೋಡೋಕೆ ಕಷ್ಟ ಆಗುತ್ತೆ ಎಂದಿದ್ದಾರೆ. ನಟ ದರ್ಶನ್ ಅವಸ್ಥೆ ನೋಡಿ ಕಣ್ಣೀರು ಸುರಿಸಿದ ರಚಿತಾರಾಮ್‌ ಅವರಿಗೆ ಸ್ವತಃ ದರ್ಶನ್‌ ಅವರೇ ಸಾಂತ್ವನ ಹೇಳಿದ್ದಾರೆ. ಬಳಿಕ ನಟ ದರ್ಶನ್ ಯೋಗಕ್ಷೇಮ ವಿಚಾರಿಸಿದ್ದಾರೆ. ಕೆಲಹೊತ್ತು ಇಬ್ಬರೂ ಸಿನಿಮಾ ಬಗ್ಗೆಯೂ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

Ad Widget . Ad Widget .

ಬ್ಯಾನರ್‌ನಿಂದ ನಾನು ಇಂಡಸ್ಟ್ರಿಗೆ ಇಂಟ್ರಡ್ಯೂಸ್ ಆಗಿದ್ದು. ಅವ್ರು ನೋ ಅಂದಿದ್ರೆ.. ಬಿಂದ್ಯಾ ರಾಮ್ ರಚಿತಾ ರಾಮ್ ಆಗ್ತಿರಲಿಲ್ಲ. ಅವರ ಖುಣ ನಮ್ಮ ಕುಟುಂಬದ ಮೇಲೆ ಇದೆ. ಆದಷ್ಟು ಬೇಗ ನಮಗೆ ಒಳ್ಳೆಯ ಸುದ್ದಿ ಸಿಗಲಿ ಎಂದು ದೇವರಲ್ಲಿ ಕೇಳಿಕೊಳ್ತೀನಿ. ಸಿನಿಮಾರಂಗಕ್ಕೆ ನನ್ನನ್ನು ಪರಿಚಯಿಸಿದ ದರ್ಶನ್ ಅವರು ನನಗೆ ಗುರು ಸಮಾನರು. ನನ್ನ ಜೀವನದ ತಪ್ಪುಗಳನ್ನು ತಿದ್ದಿ ಮಾರ್ಗದರ್ಶನ ನೀಡಿದ ಅವರು ಇಂತಹ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ನಂಬಲು ಸ್ವಲ್ಪ ಕಷ್ಟ ಆಗುತ್ತಿದೆ ಎಂದರು.

Leave a Comment

Your email address will not be published. Required fields are marked *