ಸಮಗ್ರ ನ್ಯೂಸ್: ಫೇಸ್ಬುಕ್ನಲ್ಲಿ ಪರಿಚಯವಾಗಿದ್ದ ಯುವತಿ, ಮಂಡ್ಯದ ಪಾಂಡವಪುರ ಮೂಲದ ಅರ್ಚಕನಿಗೆ(60) ಜೊತೆ ಚಾಟಿಂಗ್ ಮಾಡಿದ ಲಕ್ಷ, ಲಕ್ಷ ಪಂಗನಾಮ ಹಾಕಿದ್ದಾಳೆ.
ಮಂಡ್ಯದ ಪಾಂಡವಪುರದ ಪಟ್ಟಸೋಮನಹಳ್ಳಿ ಗ್ರಾಮದ ಶಿವಶೈಲ ದೇವಸ್ಥಾನದ ಅರ್ಚಕ ವಿಜಯ್ ಕುಮಾರ್ ಹಣ ಕಳೆದುಕೊಂಡು, ಸೈಬರ್ ಕ್ರೈಂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ವಿಜಯಕುಮಾರ್ ಕುಟುಂಬದಿಂದ ದೂರವಾಗಿ ಒಬ್ಬರೇ ವಾಸಿಸುತ್ತಿದ್ದರು. ಇವರಿಗೆ ಕೆಲ ದಿನಗಳ ಹಿಂದೆ ಫೇಸ್ಬುಕ್ನಲ್ಲಿ ಒಬ್ಬಳು ಸುಂದರಿ ಪರಿಚಯವಾಗಿದ್ದಾಳೆ. ಹೀಗಾಗಿ ಆಕೆ ಜತೆ ಪ್ರತಿ ದಿನ ಚಾಟಿಂಗ್ ಮಾಡುತ್ತಿದ್ದ ವಿಜಯ್ ಕುಮಾರ್ ಬಗ್ಗೆ ತಿಳಿದುಕೊಂಡ ಯುವತಿ, ವಸತಿ, ಆರೋಗ್ಯ ಸಮಸ್ಯೆ ಅಂತ ಹೇಳಿ ಹಂತ ಹಂತವಾಗಿ ಹಣ ಪಡೆದುಕೊಂಡಿದ್ದಾಳೆ. ಹೀಗೆ ಸುಮಾರು 1 ಲಕ್ಷದ 40 ಸಾವಿರದಷ್ಟು ಹಣವನ್ನು ಲಪಟಾಯಿಸಿರುವ ಬಗ್ಗೆ ಅರ್ಚಕರು ಹೇಳಿದ್ದಾರೆ.
ಬಣ್ಣ ಬಣ್ಣದ ಮಾತುಗಳಿಂದ ಅರ್ಚಕನನ್ನು ಬಲೆ ಹಾಕಿದ ಸುಂದರಿ ಮಾತು ನಂಬಿ ಫೋನ್ ಪೇ ಮೂಲಕ ವಿಜಯ್ ಹಣ ಕಳುಹಿಸಿದ್ದರು. ಹಣ ಕೊಟ್ಟ ಬಳಿಕ ಭೇಟಿ ಆಗುವಂತೆ ಸುಂದರಿಗೆ ವಿಜಯ್ ಒತ್ತಡ ಹೇರಲಾರಂಭಿಸಿದ್ದಾರೆ. ಆದರೆ, ಇಂದು, ನಾಳೆ ಎಂದು ಫೇಸ್ಬುಕ್ ಬ್ಲಾಕ್ ಮಾಡಿ ಎಸ್ಕೆಪ್ ಆಗಿದ್ದಾಳೆ. ಸುಂದರಿ ಮಾಯವಾದ ಬಳಿಕ ತಾನು ಮೋಸ ಹೋಗಿರುವ ಬಗ್ಗೆ ಮನವರಿಕೆಯಾಗಿದ್ದು, ಹಣ ವಾಪಸ್ ಕೊಡಿಸುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ಸದ್ಯ ಮಂಡ್ಯದ ಸೈಬರ್ ಕ್ರೈಮ್ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.