Ad Widget .

ಶೇಖ್‌ ಹಸೀನಾರ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದುಗೊಳಿಸಿದ ಬಾಂಗ್ಲಾ ಸರಕಾರ

ಸಮಗ್ರ ನ್ಯೂಸ್‌: ಬಾಂಗ್ಲಾದೇಶದ ಸರ್ಕಾರವು ಮಾಜಿ ಪ್ರಧಾನಿ ಶೇಖ್ ಹಸೀನಾ ಹಾಗೂ ಮಾಜಿ ಸಂಸದರ ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸಿದೆ. ಈ ಹಿಂದೆ ಆಯ್ದ ದೇಶಗಳಿಗೆ ವೀಸಾ-ಮುಕ್ತ ಪ್ರಯಾಣದಂತಹ ವಿವಿಧ ಸವಲತ್ತುಗಳನ್ನು ನೀಡುತ್ತಿದ್ದ ಈ ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳನ್ನು ಹಸೀನಾ ಅವರ ಆಡಳಿತದಲ್ಲಿ ಸಂಸದರಿಗೆ ನೀಡಲಾಗಿತ್ತು. ಮುಂಬರುವ ಸಾರ್ವತ್ರಿಕ ಚುನಾವಣೆಗಳಿಗೆ ಮುಂಚಿತವಾಗಿ ಬಾಂಗ್ಲಾದೇಶದ ಹಂಗಾಮಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

Ad Widget . Ad Widget .

ಶೇಖ್ ಹಸೀನಾ ಆಗಸ್ಟ್ 5ರಿಂದ ಭಾರತದಲ್ಲಿ ನೆಲೆಸಿದ್ದು, ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಹಿಂಸಾಚಾರ ಮತ್ತು ಅವರ ಸುರಕ್ಷತೆಗೆ ಬೆದರಿಕೆಗಳ ಮಧ್ಯೆ ಆಶ್ರಯ ಪಡೆಯುತ್ತಿದ್ದಾರೆ. ಶೇಖ್ ಹಸೀನಾ ವಿರುದ್ದ ಇಲ್ಲಿಯವರೆಗೆ 44 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಪಾಸ್ ಪೋರ್ಟ್ ರದ್ದುಪಡಿಸಲು ಕಾರಣ ನೀಡಲಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *