Ad Widget .

ರೇಣುಕಾಸ್ವಾಮಿ ಕೊಲೆ ಪ್ರಕರಣ| ಚಾರ್ಜ್ ಶೀಟ್ನಲ್ಲಿ ನಟ ದರ್ಶನ್ ನನ್ನು ಎ 1 ಆರೋಪಿ ಮಾಡಲು ತಯಾರಿ

ಸಮಗ್ರ ನ್ಯೂಸ್: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಎ2 ಆರೋಪಿಯಿಂದ ಎ1 ಆರೋಪಿ ಸ್ಥಾನಕ್ಕೆ ಏರಿದ ದರ್ಶನ್ ಗೆ ಚಾರ್ಜ್ ಶೀಟ್ ಬಡ್ತಿ ನೀಡಲು ತಯಾರಿ ನಡೆದಿದೆ.

Ad Widget . Ad Widget .

ಕೊಲೆ ಕೇಸಿನ ತನಿಖೆ ವೇಳೆ ದರ್ಶನ್ ಎ2 ಆರೋಪಿಯನ್ನಾಗಿ ಮಾಡಲಾಗಿತ್ತು. ಎ1 ಆರೋಪಿಯನ್ನಾಗಿ ಪವಿತ್ರಾಗೌಡರನ್ನ (Pavithra Gowda) ಹೆಸರಿಸಲಾಗಿತ್ತು. ತನಿಖೆ ಮುಗಿದು ಚಾರ್ಜ್ ಶೀಟ್ ಸಲ್ಲಿಕೆಯ ಸಿದ್ಧತೆಯಲ್ಲಿ ಎ2 ಇಂದ ಎ1 ಗೆ ಬಡ್ತಿ ನೀಡಲು ಸಿದ್ಧತೆಗಳು ಆರಂಭವಾಗಿದೆ. ಇದು ದರ್ಶನ್ ಗೆ ಮತ್ತಷ್ಟು ಸಂಕಷ್ಟ ತಂದೊಡ್ಡೋದು ಫಿಕ್ಸ್ ಎಂದು ಪೊಲೀಸರ ಆಪ್ತ ಮೂಲಗಳಿಂದ ತಿಳಿದುಬಂದಿದೆ.

Ad Widget . Ad Widget .

ದರ್ಶನ್ ಎ1 ಆರೋಪಿ ಮಾಡಲು ಕಾರಣಗಳೇನು?

  1. ದರ್ಶನ್ ನಿಂದಲೇ ರೇಣುಕಾಸ್ವಾಮಿಯನ್ನ ಕಿಡ್ನ್ಯಾಪ್ ಮಾಡಲು ಸೂಚನೆ
  2. ಚಿತ್ರದುರ್ಗದ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರನಿಗೆ ಡೀಲ್
  3. ಡೀಲ್ ಬಳಿಕ ರೇಣುಕಾಸ್ವಾಮಿಯನ್ನ ಕಿಡ್ನ್ಯಾಪ್ ಮಾಡಿ ಆರ್.ಆರ್ ನಗರದ ಪಟ್ಟಣಗೆರೆಯ ಶೆಡ್ಗೆ ಕರೆತರಲಾಗಿತ್ತು
  4. ಶೆಡ್ ನಲ್ಲಿ ದರ್ಶನ್ ನಿಂದ ಬೆಲ್ಟ್ ಲಾಠಿ ಹಾಗೂ ಕಬ್ಬಿಣದ ರಾಡ್ ನಿಂದ ಹಲ್ಲೆ
  5. ರೇಣುಕಾಸ್ವಾಮಿಯ ಮೇಲೆ ಸಿಕ್ಕ ಸಿಕ್ಕ ಕಡೆ ಒದ್ದಿದ್ದ ದರ್ಶನ್
  6. ರೇಣುಕಾಸ್ವಾಮಿ ಸಾವನ್ನಪ್ಪಿದ್ದ ಬಳಿಕ ಶವ ವಿಲೇವಾರಿಗೆ ಪ್ಲ್ಯಾನ್
  7. ಶವ ವಿಲೇವಾರಿ ಮಾಡುವಂತೆ ಪ್ರದೋಷ್ ಗೆ 30 ಲಕ್ಷ ಹಣ ಕೊಟ್ಟಿದ್ದ ದರ್ಶನ್
  8. ಕೊಲೆ ಮಾಡಿದ ಸ್ಪಾಟ್ ನಲ್ಲಿ ಸಿಸಿಟಿವಿ ಡಿವಿಆರ್ ನಲ್ಲಿನ ವೀಡಿಯೊ ಅಳಿಸಿ ಹಾಕಿ ಸಾಕ್ಷಿ ನಾಶದ ಯತ್ನ
  9. ಪ್ರಮುಖ ಸೂತ್ರಧಾರನೆ ದರ್ಶನ್ ಆದ್ರಿಂದ ಎ1 ಆರೋಪಿ ಮಾಡಲು ಪೊಲೀಸರು ತಯಾರಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Leave a Comment

Your email address will not be published. Required fields are marked *