Ad Widget .

ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ವಿದೇಶ ಪ್ರವಾಸ| ಆ. 23 ರಂದು ರೈಲಿನಲ್ಲಿ ಉಕ್ರೇನ್ ಗೆ ಪ್ರಯಾಣ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ವಿದೇಶ ಪ್ರವಾಸ ಕೈಗೊಂಡಿದ್ದು, ಪೋಲೆಂಡ್ನಲ್ಲಿ ಲ್ಯಾಂಡ್ ಆಗಿದ್ದಾರೆ. 40 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಪೋಲೆಂಡ್ಗೆ ಭೇಟಿ ನೀಡಿದ್ದಾರೆ. ಪೋಲೆಂಡ್ ಪ್ರವಾಸದ ಬಳಿಕ ಪ್ರಧಾನಿ ಮೋದಿ ಉಕ್ರೇನ್ಗೆ ಭೇಟಿ ನೀಡಲಿದ್ದಾರೆ. ರಷ್ಯಾ ಯುದ್ಧದ ಬಳಿಕ ಉಕ್ರೇನ್ಗೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಪೋಲೆಂಡ್ನಿಂದ ಪ್ರಧಾನಿ ಮೋದಿ ಆ. 23 ರಂದು ಐಷಾರಾಮಿ ‘ಟ್ರೇನ್ ಫೋರ್ಸ್ ಒನ್’ನಲ್ಲಿ ಉಕ್ರೇನ್ಗೆ ಪ್ರಯಾಣಿಸಲಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ

Ad Widget . Ad Widget . Ad Widget .

ರೈಲಿನ ವಿಶೇಷತೆಗಳು:
ಪೋಲೆಂಡ್ನಿಂದ ಪ್ರಧಾನಿ ಮೋದಿ ಆ. 23 ರಂದು ಉಕ್ರೇನ್ ರಾಜಧಾನಿ ಕೀವ್ಗೆ ‘ಟ್ರೇನ್ ಫೋರ್ಸ್ ಒನ್’ (Train Force One) ಐಶಾರಾಮಿ ರೈಲಿನಲ್ಲಿ ಪ್ರಯಾಣಿಸಲಿದ್ದಾರೆ. ಇದಕ್ಕೂ ಮುನ್ನ ಅಮೆರಿಕಾ ಅಧ್ಯಕ್ಷ ಜೋ ಬೈಡನ್ (Joe Biden) ಹಾಗೂ ಫ್ರೆಂಚ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ (Emmanuel Macron) ಅವರು ಕೀವ್ ಭೇಟಿ ವೇಳೆ ಈ ರೈಲಿನಲ್ಲಿ ಪ್ರಯಾಣಿಸಿದ್ದರು. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelensky) ಅವರು ತಮ್ಮ ಅಂತರರಾಷ್ಟ್ರೀಯ ಪ್ರವಾಸಗಳಿಗಾಗಿ ಈ ರೈಲಿನಲ್ಲಿ ಪ್ರಯಾಣಿಸುತ್ತಾರೆ.

ಈ ರೈಲು ಮರದ ಫಲಕದಿಂದ ಸಿದ್ಧಪಡಿಸಿದ ಕ್ಯಾಬಿನ್ಗಳನ್ನು ಹೊಂದಿದ್ದು, ಅತಿಥಿಗಳೊಂದಿಗೆ ಸಭೆ ಕೈಗೊಳ್ಳಲು ಟೇಬಲ್, ಸೋಫಾ, ಟಿವಿ ಹಾಗೂ ಅಚ್ಚುಕಟ್ಟಾದ ಮಲಗುವ ವ್ಯವಸ್ಥೆಯನ್ನು ಈ ರೈಲು ಒಳಗೊಂಡಿದೆ. 2014ರಲ್ಲಿ ಮೂಲತಃ ಕ್ರೈಮಿಯಾದಲ್ಲಿ ಪ್ರವಾಸಿಗರಿಗಾಗಿ ಈ ರೈಲನ್ನು ನಿರ್ಮಿಸಲಾಯಿತು. ಯುದ್ಧದ ಸಂದರ್ಭದಲ್ಲಿ ರಷ್ಯಾದ ವಿದ್ಯುತ್ ಜಾಲಗಳು ಮತ್ತು ವಿದ್ಯುತ್ ಉತ್ಪಾದನಾ ಸೌಲಭ್ಯಗಳ ಮೇಲೆ ಗಮನಾರ್ಹ ಸಮಸ್ಯೆಯಿಂದಾಗಿ ಉಕ್ರೇನ್ ರೈಲುಗಳನ್ನು ವಿದ್ಯುತ್ ಇಂಜಿನ್ನಿಂದ ಡೀಸೆಲ್ ಇಂಜಿನ್ಗಳಾಗಿ ಪರಿವರ್ತನೆ ಮಾಡಲಾಗಿದೆ. ಈ ಪರಿವರ್ತನೆಯಿಂದಾಗಿ ಪೋಲೆಂಡ್ ಗಡಿಯಿಂದ ಕೀವ್ ಗೆ ರೈಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ.

ಯುದ್ಧದ ಸಂದರ್ಭದಲ್ಲಿ ಹಾನಿಗೊಳಗಾದ ದೇಶದ ಮೂಲಕ ವಿಶ್ವ ನಾಯಕರು ಮತ್ತು ವಿಐಪಿಗಳನ್ನು ಸಾಗಿಸಲು ಈ ಐಷಾರಾಮಿ ರೈಲನ್ನು ಮರು ರೂಪಿಸಲಾಯಿತು. ರಷ್ಯಾ ಆಕ್ರಮಣದ ಸಮಯದಲ್ಲಿಯೂ ಲಕ್ಷಾಂತರ ಜನರನ್ನು, ಅನೇಕ ನಾಯಕರನ್ನು ಈ ರೈಲಿನ ಮೂಲಕ ಸ್ಥಳಾಂತರಿಸಲಾಗಿದೆ. ರಷ್ಯಾ ಆಕ್ರಮಣದ ಹೊರತಾಗಿಯೂ ದೇಶದ ಸಾರಿಗೆ ವ್ಯವಸ್ಥೆಯನ್ನು ಸುಗಮವಾಗಿ ನಿರ್ವಹಿಸುತ್ತಿರುವ ಹಿನ್ನಲೆಯಲ್ಲಿ ಈಗಲೂ ಈ ರೈಲು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

ಜೂನ್ ನಲ್ಲಿ ಇಟಲಿಯಲ್ಲಿ ನಡೆದ ಜಿ7 ಶೃಂಗಸಭೆಯ (G7 Summit) ಸಂದರ್ಭದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಪ್ರಧಾನಿ ಮೋದಿ ಭೇಟಿಯಾಗಿದ್ದರು. ಅದಾದ ಬಳಿಕ ಆಗಸ್ಟ್ 23 ರಂದು ಉಕ್ರೇನ್ ಭೇಟಿ ನೀಡುವ ಮೂಲಕ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.

Leave a Comment

Your email address will not be published. Required fields are marked *