Ad Widget .

ಪ್ರಾಸಿಕ್ಯೂಷನ್ಗೆ ಅನುಮತಿ: ರಾಜ್ಯಪಾಲರಿಗೆ ಬಂತು ಬುಲೆಟ್‌ಪ್ರೂಫ್‌ ಕಾರು..!

ಸಮಗ್ರ ನ್ಯೂಸ್: ಕರ್ನಾಟಕದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರ ವಾಹನದಲ್ಲಿ ಗುಪ್ತಚರ ಇಲಾಖೆಯ ಸಲಹೆ ಮೇರೆಗೆ ಇದೀಗ ಬದಲಾವಣೆ ಮಾಡಲಾಗಿದೆ. ಇದುವರೆಗೆ ಸಾಮಾನ್ಯ ಕಾರು ಬಳಸುತ್ತಿದ್ದ ರಾಜ್ಯಪಾಲರು ಇನ್ನು ಮುಂದೆ ಬುಲೆಟ್‌ ಪ್ರೂಫ್‌ ಕಾರು ಬಳಸಲಿದ್ದಾರೆ.

Ad Widget . Ad Widget .

ಮುಡಾ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ ಬಳಿಕ ರಾಜ್ಯದ ಎಲ್ಲೆಡೆ ಕಾಂಗ್ರೆಸ್‌ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ರಾಜಭವನಕ್ಕೆ ನುಗ್ಗಲೂ ಕಾಂಗ್ರೆಸ್‌ ಕಾರ್ಯಕರ್ತರು ಯತ್ನಿಸಿದ್ದರು. ಅವರನ್ನು ಪೊಲೀಸರು ಬಂಧಿಸಿದ್ದರು. ಇನ್ನು, ರಾಜ್ಯದ ಹಲವೆಡೆ ಗವರ್ನರ್‌ಗೆ ʼಗೋ ಬ್ಯಾಕ್‌ʼ ಪ್ರತಿಭಟನೆ ನಡೆಸಲಾಗಿತ್ತು. ಜೊತೆಗೆ, ರಾಜ್ಯಪಾಲರ ಫೋಟೋಗೆ ಚಪ್ಪಲಿ ಹಾರ ಹಾಕಲಾಗಿತ್ತು. ಕೆಲವು ಕಾಂಗ್ರೆಸ್ ನಾಯಕರಂತೂ ಎಲ್ಲೆ ಮೀರಿದ ಹೇಳಿಕೆಗಳನ್ನು ನೀಡಿದ್ದರು.

Ad Widget . Ad Widget .

ಮಂಗಳೂರಿನ ಕಾಂಗ್ರೆಸ್‌ ಮುಖಂಡ ಐವನ್‌ ಡಿಸೋಜಾ, ಬಾಂಗ್ಲಾದೇಶದ ಪ್ರಧಾನಿಗೆ ಆದ ಸ್ಥಿತಿಯೇ ರಾಜ್ಯಪಾಲರಿಗೂ ಆಗಲಿದೆ ಎಂದು ಹೇಳಿದ್ದರು, ಅವರ ಮೇಲೆ ಕೇಸು ದಾಖಲಿಸಲಾಗಿದೆ. ಈ ಎಲ್ಲದರ ಹಿನ್ನೆಲೆಯಲ್ಲಿ, ಎಚ್ಚರಿಕೆ ವಗಹಿಸುವಂತೆ ಗುಪ್ತಚರ ಇಲಾಖೆಯು ರಾಜ್ಯಪಾಲರಿಗೆ ಸೂಚನೆ ನೀಡಿದೆ. ಹೀಗಾಗಿ, ಪ್ರವಾಸದಿಂದ ಬೆಂಗಳೂರಿಗೆ ವಾಪಸ್ ಆಗಿರುವ ಗೆಹ್ಲೋಟ್ ಅವರು ಎಚ್ಚರಿಕೆ ಹೆಜ್ಜೆಯನ್ನಿಟ್ಟಿದ್ದಾರೆ. ಇನ್ನೂ ಕಾರ್ಯಕ್ರಮಗಳಲ್ಲಿ ಅನುಪಸ್ಥಿತಿ ಇರುತ್ತಿದ್ದರು.

Leave a Comment

Your email address will not be published. Required fields are marked *