Ad Widget .

ಪಾವಗಡ: ಬೀಗರೂಟ ಮಾಡಿದ್ದ 24 ಮಂದಿ ಅಸ್ವಸ್ಥ; ಆಸ್ಪತ್ರೆಗೆ ದಾಖಲು

ಸಮಗ್ರ ನ್ಯೂಸ್: ಬೀಗರೂಟ ಮಾಡಿದ್ದ ನಂತರ ವಾಂತಿ, ಬೇಧಿ ಕಾಣಿಸಿಕೊಂಡು ಸುಮಾರು 24 ಮಂದಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಶ್ರೀರಂಗಪುರ ತಾಂಡಾದಲ್ಲಿ ನಡೆದಿದೆ. ಅಸ್ವಸ್ಥಗೊಂಡಿದ್ದವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Ad Widget . Ad Widget .

ತುಮಕೂರು ಜಿಲ್ಲೆಯ ಪಾವಗಡದ ನಾಗೇನಹಳ್ಳಿ ತಾಂಡಾದಲ್ಲಿ ಮದುವೆ ನಡೆದಿದೆ. ಅಲ್ಲದೇ ಅಗಸ್ಟ್ 16 ರಂದು ಶ್ರೀರಂಗಪುರ ತಾಂಡಾದಲ್ಲಿ ಬೀಗರೂಟ ನಡೆದಿತ್ತು. ಬೀಗರು ಊಟ ಮಾಡಿ ಮನೆಗೆ ತೆರಳಿದ ವೇಳೆಯಲ್ಲಿ ಹಲವರಲ್ಲಿ ಅನಾರೋಗ್ಯ ಕಾಣಿಸಿಕೊಂಡಿತ್ತು. ಅಸ್ವಸ್ಥಗೊಂಡವರನ್ನು ಪಾವಗಡ, ಬೆಂಗಳೂರು, ಹಿಂದೂಪುರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Ad Widget . Ad Widget .

Leave a Comment

Your email address will not be published. Required fields are marked *