ಸಮಗ್ರ ನ್ಯೂಸ್: ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಅವರ ಸರ್ಕಾರ ಪತನವಾದ ಬೆನ್ನಲ್ಲೇ ಹಿಂಸಾಚಾರ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಆತಿಥ್ಯದಲ್ಲಿ ನಡೆಯಬೇಕಿದ್ದ ಐಸಿಸಿ ಮಹಿಳಾ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯನ್ನು ಯುನೈಟೆಡ್ ಅರಬ್ ಎಮಿರೈಟ್ಸ್‌ಗೆ (ಯುಎಇ) ವರ್ಗಾಯಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಘೋಷಿಸಿದೆ.
ಇದೇ ವರ್ಷ ನಡೆಯಬೇಕಿರುವ ಐಸಿಸಿ ಮಹಿಳಾ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಬಾಂಗ್ಲಾದೇಶದಿಂದ ಯುನೈಟೆಡ್ ಅರಬ್ ಎಮಿರೈಟ್ಸ್‌ಗೆ ವರ್ಗಾವಣೆಯಾಗಿದೆ. ಭದ್ರತೆ ಕೊರತೆ ಎದುರಾಗಿರುವ ಕಾರಣ ಅನಿವಾರ್ಯವಾಗಿ ಟಿ20 ವಿಶ್ವಕಪ್ ಟೂರ್ನಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಬೇರೆಡೆಗೆ ವರ್ಗಾವಣೆ ಮಾಡಿದೆ. ಜುಲೈನಲ್ಲೇ ಶುರುವಾಗಬೇಕಿದ್ದ ಟೂರ್ನಿಯು ಈಗ ಅಕ್ಟೋಬರ್‌ನಲ್ಲಿ ಆಯೋಜನೆ ಆಗಲಿದೆ.
ಹತ್ತು ತಂಡಗಳನ್ನು ಒಳಗೊಂಡ ಟೂರ್ನಿಯು ಜುಲೈ ಅಂತ್ಯಕ್ಕೆ ಶುರುವಾಗಬೇಕಿತ್ತು. ಇದೀಗ ಯುಎಇ ಆತಿಥ್ಯದಲ್ಲಿ ಅಕ್ಟೋಬರ್ 3ರಿಂದ 20ರವರೆಗೆ ಆಯೋಜನೆ ಆಗಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಧಿಕೃತ ಮಾಹಿತಿ ನೀಡಿದೆ.