ಸಮಗ್ರ ನ್ಯೂಸ್: ಮನೆಯ ಅಂಗಳದಲ್ಲಿಯೇ ವ್ಯಕ್ತಿಯನ್ನು ಮಾರಾಕಾಸ್ತ್ರದಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಎಸ್.ಪಿ.ಬಿ ಕಾಂಪೌಂಡಿನಲ್ಲಿ ನಡೆದಿದೆ.
ಕೊಲೆಯಾದ ಎಸ್.ಪಿ.ಬಾಲಕೃಷ್ಣ ಭಟ್ (73) ಅವರು ನಿವೃತ್ತ ಶಿಕ್ಷಕ ಎನ್ನಲಾಗಿದೆ. ಅವರ ಮನೆಯ ಎದುರೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದ್ದು, ತಲೆಗೆ ಭಾರೀ ಹೊಡೆತ ಬಿದ್ದಿದೆ ಎಂದು ಪ್ರಕರಣ ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಧಾವಿಸಿದ್ದು ಪ್ರಕರಣದ ಕುರಿತು ತನಿಖೆ ಆರಂಭಿಸಿದ್ದಾರೆ. ಕೊಲೆಯನ್ನು ಯಾರು, ಯಾಕೆ ಮಾಡಿದ್ದಾರೆ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.