Ad Widget .

ಇಂದು ರಕ್ಷಾ ಬಂಧನ ಸಂಭ್ರಮ| ರಾಖಿ ಕಟ್ಟಲು ಉತ್ತಮ‌ ಸಮಯ ಯಾವುದು ಗೊತ್ತಾ?

ಸಮಗ್ರ ನ್ಯೂಸ್: ರಕ್ಷಾ ಬಂಧನ ಹಬ್ಬವನ್ನ ಭಾರತದಲ್ಲಿ ಬಹಳ ಜೋರಾಗಿಯೇ ಆಚರಿಸಲಾಗುತ್ತದೆ. ಸಹೋದರ ಹಾಗೂ ಸಹೋದರಿಯರ ನಡುವಿನ ಬಾಂಧವ್ಯವನ್ನು ಗಟ್ಟಿ ಮಾಡುವ ಹಬ್ಬ ಇದು ಎನ್ನಬಹುದು. ಪ್ರತಿಯೊಬ್ಬ ತಂಗಿಗೆ ಅಣ್ಣ ಶ್ರೀರಕ್ಷೆಯಾಗಿ ನಿಂತರೆ, ತಂಗಿ ಅಣ್ಣನಿಗೆ ಎರಡನೇ ಅಮ್ಮನ ರೀತಿ ಮಮತೆಯನ್ನು ತೋರುತ್ತಾಳೆ.

Ad Widget . Ad Widget .

ಇಂತಹ ಪವಿತ್ರ ಬಂಧವನ್ನು ಬೆಸೆಯುವ ಹಬ್ಬವೇ ರಕ್ಷಾ ಬಂಧನ. ಈ ಹಬ್ಬವನ್ನು ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಈ ದಿನದಂದು, ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟುವುದರಿಂದ ಇಬ್ಬರ ನಡುವಿನ ಸಂಬಂಧ ಗಟ್ಟಿಯಾಗುತ್ತದೆ ಎನ್ನುವ ನಂಬಿಕೆ ಇದೆ.

Ad Widget . Ad Widget .

ಈ ವರ್ಷ ಆಗಸ್ಟ್ 19 ರಂದು ಅಂದರೆ ಇಂದು ರಾಖಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಬಾರಿಯ ರಕ್ಷಾಬಂಧನ ತುಂಬಾ ವಿಶೇಷವಾಗಿರಲಿದೆ. ಸೋಮವಾರದಂದು ರಾಖಿ ಹಬ್ಬ ಬರುವುದು ಶ್ರಾವಣ ಸೋಮವಾರದ ವಿಶೇಷತೆ ಇದೆ. ಈ ದಿನ ಸಹೋದರನಿಗೆ ರಾಖಿ ಕಟ್ಟಿ ತಮ್ಮನ್ನ ರಕ್ಷಿಸುವಂತೆ ಈ ದಿನ ಕೇಳಿಕೊಳ್ಳಲಾಗುತ್ತದೆ. ಶ್ರಾವಣ ಮಾಸದಲ್ಲಿ ಬರುವ ವಿಶೇಷ ಹಬ್ಬಗಳಲ್ಲಿ ರಕ್ಷಾಬಂಧನ ಸಹ ಒಂದು. ಈ ದಿನ ನಾವು ಅನೇಕ ವಿಶೇಷವಾದ ಕೆಲಸಗಳನ್ನ ಮಾಡುವುದರಿಂದ ಅಣ್ಣನಿಗೆ ಯಶಸ್ಸು ಸಿಗುತ್ತದೆ.

ಆಗಸ್ಟ್ 19 ರಂದು ರಕ್ಷಾಬಂಧನದ ಶುಭ ಸಮಯವು ಮಧ್ಯಾಹ್ನ 1:30 ರಿಂದ ರಾತ್ರಿ 9:08 ರವರೆಗೆ ಇರುತ್ತದೆ. ಅಂದು ಸಹೋದರರಿಗೆ ರಾಖಿ ಕಟ್ಟಲು 7 ಗಂಟೆ 38 ನಿಮಿಷ ಸಿಗುತ್ತದೆ. ಈ ಸಮಯದಲ್ಲಿ ರಾಖಿ ಕಟ್ಟಿದರೆ ಅದೃಷ್ಟ ಬರುತ್ತದೆ ಎನ್ನುವ ನಂಬಿಕೆ ಇದೆ. ಈ ವರ್ಷ, ರಕ್ಷಾಬಂಧನದಂದು ಮೂರು ಮಂಗಳಕರ ಸಂಯೋಜನೆಗಳು ರೂಪುಗೊಳ್ಳುತ್ತಿವೆ. ಅಂದು ಇಡೀ ದಿನ ಶೋಭನ ಯೋಗ ಉಳಿಯುತ್ತದೆ. ಸರ್ವಾರ್ಥ ಸಿದ್ಧಿ ಯೋಗವು ಬೆಳಗ್ಗೆ 05:53 ರಿಂದ 08:10 ರವರೆಗೆ ಇದ್ದರೆ, ರವಿ ಯೋಗವು ಬೆಳಗ್ಗೆ 05:53 ರಿಂದ 08:10 ರವರೆಗೆ ಇರುತ್ತದೆ.

ಆಚರಣೆ ಹೇಗೆ?
ಮೊದಲಿಗೆ ಸಹೋದರಿ, ಸಹೋದರನ ಹಣೆಗೆ ತಿಲಕವನ್ನು ಇಟ್ಟು, ನೆತ್ತಿಯ ಮೇಲೆ ಅಕ್ಕಿ ಅಥವಾ ಅಕ್ಷತೆಯನ್ನು ಹಾಕಬೇಕು. ಬಳಿಕ ಅಣ್ಣನಿಗೆ ಆರತಿ ಬೆಳಗಬೇಕು. ಕೊನೆಯಲ್ಲಿ ಸಹೋದರನಿಗೆ ರಾಖಿಯನ್ನು ಕಟ್ಟಿ ಸಿಹಿಯನ್ನು ತಿನ್ನಿಸಬೇಕು. ತಂಗಿ ರಾಖಿ ಕಟ್ಟಿದ ನಂತರ ಅಣ್ಣ ಪ್ರೀತಿಯ ಸಹೋದರಿಗೆ ಉಡುಗೊರೆ ಕೊಡುತ್ತಾನೆ. ಸಹೋದರಿಯು ತನ್ನ ಸಹೋದರನ ಕೈಗೆ ರಾಖಿ ಕಟ್ಟುವ ಮೂಲಕ ಅವನ ರಕ್ಷಣೆಯನ್ನು ಕೋರುತ್ತಾಳೆ. ಇದು ಸಹೋದರನಿಗೆ ತನ್ನ ಸಹೋದರಿಯನ್ನು ರಕ್ಷಿಸುವ ಜವಾಬ್ದಾರಿಯನ್ನು ನೀಡುತ್ತದೆ. ಜೊತೆಗೆ ಸಹೋದರ ಮತ್ತು ಸಹೋದರಿಯರ ನಡುವಿನ ಬಂಧವನ್ನು ಬಲಪಡಿಸುತ್ತದೆ.

ನಿಮ್ಮ ಸಹೋದರ ಜೀವನದಲ್ಲಿ ಯಾವುದಾದರೂ ಸಮಸ್ಯೆಗಳನ್ನ ಅನುಭವಿಸುತ್ತಿದ್ದರೆ, ಆರ್ಥಿಕ ತೊಂದರೆಯಿಂದ ಪರದಾಡುತ್ತಿದ್ದರೆ ಅಥವಾ ಜೀವನದಲ್ಲಿ ಬೆಳವಣಿಗೆ ಆಗಲು ಕಷ್ಟವಾಗುತ್ತಿದ್ದರೆ ಇದಕ್ಕೆ ಈ ದಿನ ಪರಿಹಾರವಿದೆ. ಮುಖ್ಯವಾಗಿ ಈ ದಿನ ಲಕ್ಷ್ಮಿ ಪೂಜೆ ಮಾಡಿ. ರಕ್ಷಾ ಬಂಧನದ ದಿನ ಅಕ್ಕಿಯ ಪಾಯಸವನ್ನ ದೇವಿಗೆ ಅರ್ಪಣೆ ಮಾಡಿದರೆ, ಸಹೋದರರ ಎಲ್ಲಾ ಕಷ್ಟಗಳು ಪರಿಹಾರವಾಗುತ್ತದೆ ಎನ್ನಲಾಗುತ್ತದೆ.

Leave a Comment

Your email address will not be published. Required fields are marked *