Ad Widget .

ದಶಕದ ಬಳಿಕ‌ ರಬ್ಬರ್ ದರದಲ್ಲಿ ಚೇತರಿಕೆ| ಕರಾವಳಿಯ ರಬ್ಬರ್ ಬೆಳೆಗಾರರ ಮುಖದಲ್ಲಿ ಮಂದಹಾಸ

ಸಮಗ್ರ ನ್ಯೂಸ್: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಬ್ಬರ್​ ದರ ಏರಿಕೆಯಾಗಿದ್ದು, ಬೆಳೆಗಾರರ ​​ಮುಖದಲ್ಲಿ ಮಂದಹಾಸ ಮೂಡಿದೆ. ಬರೋಬ್ಬರಿ 13 ವರ್ಷಗಳ ನಂತರ ರಬ್ಬರ್ ಬೆಲೆ ಏರಿಕೆಯಾಗಿದೆ. ಅಂದರೆ 2011ರಲ್ಲಿ ರಬ್ಬರ್​ ಬೆಲೆ ಕೆಜಿಗೆ 242ರೂ. ಈ ಬಳಿಕ ರಬ್ಬರ್​ ಬೆಲೆ ಕಳೆದ ವರ್ಷ ರಬ್ಬರ್​ ಬೆಲೆ ಕೆಜಿಗೆ 149 ರೂ.ಗೆ ಇಳಿಕೆಯಾಗಿತ್ತು. ಈ ವರ್ಷ ರಬ್ಬರ್ (ಆರ್‌ಎಸ್‌ಎಸ್ 4 ಗ್ರೇಡ್) ಕೆಜಿಗೆ 239 ರೂ., ಆರ್‌ಎಸ್‌ಎಸ್ 5 ಗ್ರೇಡ್ ಕೆಜಿಗೆ 234 ರೂ. ಮತ್ತು ಲ್ಯಾಟೆಕ್ಸ್ ಬೆಲೆಯು ಕೆಜಿಗೆ 165 ರೂ. ಏರಿಕೆಯಾಗಿದೆ.

Ad Widget . Ad Widget .

ರಾಜ್ಯದಲ್ಲಿ 55,000 ಹೆಕ್ಟೇರ್‌ ಪ್ರದೇಶದಲ್ಲಿ ರಬ್ಬರ್ ಬೆಳೆಯಲಾಗುತ್ತಿದೆ. ಕೇರಳ, ಕರಾವಳಿ ಜಿಲ್ಲೆಗಳು ಮತ್ತು ಕರ್ನಾಟಕದ ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾಗಿ ರಬ್ಬರ್​ ಸರಬರಾಜಿನಲ್ಲಿ ಕೊರತೆಯುಂಟಾಗಿದೆ. ಇದರಿಂದ ರಬ್ಬರ್‌ಗೆ ಬೇಡಿಕೆ ಹೆಚ್ಚುತ್ತಿದ್ದು, ಬೆಲೆ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಲ್ಲಿ ವ್ಯಾಪಾರಿಗಳು ಇದ್ದಾರೆ.

Ad Widget . Ad Widget .

ಭಾರತದಲ್ಲಿ 8.57 ಲಕ್ಷ ಟನ್​ನಷ್ಟು ರಬ್ಬರ್ ಉತ್ಪಾದನೆಯಾಗುತ್ತದೆ. ಆದರೆ, ಬಳಕೆಗೆ ಬೇಕಾಗಿದ್ದು 14.16 ಲಕ್ಷ ಟನ್‌ ರಬ್ಬರ್​ ಬೇಕು. ಬರೊಬ್ಬರಿ 5.59 ಲಕ್ಷ ಟನ್​ನಷ್ಟು ಕೊರತೆ ಇದೆ. ಇದರಿಂದ ರಬ್ಬರ್​​ಗೆ ಭಾರಿ ಬೇಡಿಕೆ ಉಂಟಾಗಿದೆ.
ಕೈಗಾರಿಕೆಗಳಿಂದ ನೈಸರ್ಗಿಕ ರಬ್ಬರ್‌ಗೆ ಬೇಡಿಕೆ ಹೆಚ್ಚಿದೆ. ಇದರಿಂದ ಬೆಲೆ ಹೆಚ್ಚಾಗುತ್ತದೆ ಎಂದು ರಬ್ಬರ್ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು ರಬ್ಬರ್ ಮಂಡಳಿ ಮೂಲಕ ರಬ್ಬರ್ ಬೆಳೆಗಾರರಿಗೆ ಆರ್ಥಿಕ ನೆರವು ನೀಡುತ್ತಿದೆ. ಹೆಚ್ಚಿನ ಇಳುವರಿಗಾಗಿ, ರೋಗ ನಿಯಂತ್ರಣ, ರಾಸಾಯನಿಕಗಳ ಸಿಂಪರಣೆ ಮತ್ತು ಮರಗಳ ಕಾವಲು ಮುಂತಾದ ಉತ್ತಮ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ನೆರವು ನೀಡುತ್ತಿದೆ.

ಕರ್ನಾಟಕದಲ್ಲಿ ರಬ್ಬರ್ ಉತ್ಪಾದನೆಯು 2019-20ರಲ್ಲಿ 41,550 ಟನ್‌ಗಳಿಂದ 2023-24ರಲ್ಲಿ 52,000 ಟನ್‌ಗಳಿಗೆ ಏರಿಕೆಯಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವ ಜಿತಿನ್ ಪ್ರಸಾದ್ ಇತ್ತೀಚೆಗೆ ರಾಜ್ಯಸಭೆಗೆ ತಿಳಿಸಿದರು.

ಕೇಂದ್ರ ಸರ್ಕಾರದ ಯೋಜನೆಯಡಿ, ಬೆಳೆಗಾರರಿಗೆ ಆರ್ಥಿಕ ನೆರವು ನೀಡಲಾಗುತ್ತದೆ ಮತ್ತು ಲ್ಯಾಟೆಕ್ಸ್ ಅನ್ನು ಕೊಯ್ಲು ಮಾಡುವ ಮತ್ತು ಶೀಟ್ ರಬ್ಬರ್ ಆಗಿ ಸಂಸ್ಕರಿಸುವ ವೈಜ್ಞಾನಿಕ ವಿಧಾನಗಳ ಬಗ್ಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

Leave a Comment

Your email address will not be published. Required fields are marked *