ಸಿಲಿಕಾನ್ ಸಿಟಿಯಲ್ಲಿ ಪೈಶಾಚಿಕ ಕೃತ್ಯ| ಮಗನ ಮುಂದೆಯೇ ತಾಯಿಯ ಮೇಲೆ ಸಾಮೂಹಿಕ ಅತ್ಯಾಚಾರ

ಸಮಗ್ರ ನ್ಯೂಸ್: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಮಗನ ಮುಂದೆಯೇ ತಾಯಿಯ ಮೇಲೆ ಅತ್ಯಾಚಾರವೆಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ರೌಡಿಶೀಟರ್ ಗ್ಯಾಂಗ್ ನಿಂದ ಪೈಶಾಚಿಕ ಕೃತ್ಯ ನಡೆದಿದ್ದು, ಒಬ್ಬರಾದ ಮೇಲೆ ಒಬ್ಬರಂತೆ ಮಹಿಳೆ ಮೇಲೆ ಕಾಮುಕರು ಎರಗಿ ಚಿತ್ರಹಿಂಸೆ ನೀಡಿ ಅಟ್ಟಹಾಸ ಮೆರೆದಿದ್ದಾರೆ.

Ad Widget ... ..

40 ವರ್ಷದ ತಾಯಿ ಮೇಲೆ ತನ್ನ ಕಣ್ಣ‌ ಮುಂದೆಯೇ ತಾಯಿ‌ ಮೇಲೆ ಅತ್ಯಾಚಾರವಾದ್ರೂ ಸಹ 20 ವರ್ಷದ ಮಗ ನಿಸ್ಸಹಾಯಕನಾಗಿದ್ದಾನೆ.

Ad Widget

ಇನ್ನೂ ಮಹಿಳೆ ಮೇಲಿನ ಅತ್ಯಾಚಾರಕ್ಕೆ ಇಬ್ಬರು ಮಹಿಳೆಯರು ಸಾಥ್
ನೀಡಿದ್ದು, ತಮ್ಮ ಕಣ್ಣಮುಂದೆ ಘಟನೆ ನಡೆಯುತ್ತಿದ್ದರು ಪಾಪಿಗಳು ಸುಮ್ಮನೆ ನಿಂತಿದ್ದರಂತೆ. ಇನ್ನೂ ಪ್ರಕರಣದಲ್ಲಿ ತೀವ್ರ ಅಸ್ವಸ್ಥಗೊಂಡಿರುವ ಸಂತ್ರಸ್ಥೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಕರಣ ಸಂಬಂಧ ರೌಡಿ ಶೀಟರ್ ಗಳಾದ ಜೋಸೆಫ್, ಶ್ರೀನಿವಾಸ್ @ ಪಾಗಲ್ ಸೀನಾ ಎಂಬುವವರ ಜೊತೆ ಸೌಮ್ಯಾ ಪ್ರತಾಪ್, ಜತಿನ್, ವಿಘ್ನೇಶ್ ಸೈಯದ್ ಶಹಬುದ್ದೀನ್, ಸ್ವಾತಿ,ಮಾದೇಶ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *