ಸಮಗ್ರ ನ್ಯೂಸ್: ಆಗಸ್ಟ್ 15ರಂದು ದೇಶದೆಲ್ಲಡೆ ಅದ್ಧೂರಿಯಾಗಿ ಆಚಸರಿಸಲಾಯಿತು. ಈ ವೇಳೆ ಹಲವೆಡೆ ಅಪರೂಪದ ಘಟನೆಗಳು ಸಂಭವಿಸಿವೆ, ಅದೆರೀತಿ ಇಲ್ಲೋಂದು ಅಪರೂಪದ ಘಟನೆಯೊಂದರ ಭಾರಿ ವೈರಲ್ ಅಗಿದ್ದು ಆಶ್ಚರ್ಯವನ್ನು ತರೆಸಿದೆ.
ಈ ವೈರಲ್ ವಿಡಿಯೊದಲ್ಲಿ ಶಾಲೆಯ ಮಕ್ಕಳು ಝಂಡಾ ಊಂಚಾ ರಹೆ ಹಮಾರಾ ಎಂಬ ಹಿಂದಿ ಭಾಷೆಯ ದೇಶ ಭಕ್ತಿಗೀತೆ ಹಾಡುತ್ತಿರುವುದು ಕೇಳುತ್ತಿದೆ.
ಆ ವೇಳೆ ರಾಷ್ಟ್ರಧ್ವಜವನ್ನು ಹಗ್ಗಕ್ಕೆ ಕಟ್ಟಿ ಮೇಲಕ್ಕೆ ಎಳೆಯುತ್ತಿದ್ದಾರೆ. ಆದರೆ ಧ್ವಜ ಮೇಲೆ ಹೋಗಿ ಎಷ್ಟೇ ಎಳೆದರೂ ಅದು ಬಿಡಿಸಿಕೊಂಡು ಹಾರಲಿಲ್ಲ. ಆಗ ಇದ್ದಕ್ಕಿದ್ದಂತೆ ಎಲ್ಲಿಂದಲೋ ಬಂದ ಹಕ್ಕಿಯೊಂದು ಧ್ವಜವನ್ನು ಬಿಡಿಸಿ ಅದು ಹಾರುವಂತೆ ಮಾಡಿ ಹಾರಿ ಹೋಗಿದೆ. ವಿಡಿಯೊ ಕೊನೆಯಲ್ಲಿ ಮಲಯಾಳಂನಲ್ಲಿ ಕೈಯಡಿ ಕೈಯಡಿ ( ಚಪ್ಪಾಳೆ ತಟ್ಟಿ, ಚಪ್ಪಾಳೆ ತಟ್ಟಿ) ಎನ್ನುತ್ತಿರುವುದು ಕೇಳಿದೆ. ಈ ಅಪರೂಪದ ಘಟನೆ ಕೇರಳದಲ್ಲಿ ನಡೆದಿದೆ.
ಆಗಸ್ಟ್ 16ರ ರಾತ್ರಿ 11.24ಕ್ಕೆ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದ್ದು, ಈಗ ಇದು ವೈರಲ್ ಆಗಿದೆ. ಈ ವಿಡಿಯೊ ಈಗಾಗಲೇ 7700ಕ್ಕೂ ಹೆಚ್ಚು ಲೈಕ್ಸ್ ,11 ಸಾವಿರಕ್ಕೂ ಹೆಚ್ಚು ವೀವ್ಸ್, 1600ಕ್ಕೂ ಹೆಚ್ಚು ರೀಟ್ವೀಟ್ ಮತ್ತು 50ರಷ್ಟು ಕಾಮೆಂಟ್ ಕೂಡ ಬಂದಿದೆ. ಹಲವರು ಈ ವಿಡಿಯೊವನ್ನು ಡೌನ್ಲೋಡ್ ಮಾಡಿ ತಮ್ಮ ಖಾತೆಯಿಂದ ಶೇರ್ ಕೂಡ ಮಾಡಿದ್ದಾರೆ.