Ad Widget .

ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಅಳವಡಿಕೆ ಯಶಸ್ವಿ

ಸಮಗ್ರ ನ್ಯೂಸ್: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ನೀರಿನಲ್ಲಿ ಕೊಚ್ಚಿ ಹೋದ ಹಲವು ದಿನಗಳ ಬಳಿಕ ಗೇಟ್ ಡಿಸೈನ್ ತಜ್ಞ ಕನ್ಹಯ್ಯ ನಾಯ್ಡು ನೇತೃತ್ವದಲ್ಲಿ ಆಪರೇಷನ್ ತುಂಗಭದ್ರಾ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ಯಶಸ್ವಿಯಾಗಿದೆ.

Ad Widget . Ad Widget .

ಕನ್ಹಯ್ಯ ನಾಯ್ಡು ನೇತೃತ್ವದಲ್ಲಿ ಸ್ಟಾಪ್ ಲಾಗ್ ಗೇಟ್ ಅಳವಡಿಸಲಾಗಿದೆ. ಒಂದನೇ ಗೇಟ್ ಅಳವಡಿಕೆ ಯಶಸ್ವಿಯಾಗಿದ್ದು, ನಾಳೆ ಮತ್ತೊಂದು ಸ್ಟಾಪ್ ಲಾಗ್ ಗೇಟ್ ಅಳವಡಿಸಲಾಗುವುದು.

Ad Widget . Ad Widget .

ಎರಡು ದಿನಗಳ ಶ್ರಮದಿಂದ ಮೊದಲ ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಯಶಸ್ವಿಯಾಗಿದ್ದು ತುಂಗಭದ್ರಾ ಜಲಾಶಯದ ಮೇಲೆ ಸಂಭ್ರಮಾಚರಣೆ ನಡೆಸಲಾಗಿದೆ. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಸಂಸದ ರಾಜಶೇಖರ ಹಿಟ್ನಾಳ್ ಮೊದಲಾದವರಿದ್ದರು. ಉಳಿದ ಎಲಿಮೆಂಟ್ ಗಳನ್ನು ನಾಳೆ ಅಳವಡಿಸಲಾಗುವುದು.

ಡ್ಯಾಂ ನೀರಿನ ಒತ್ತಡ, ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಕೊಚ್ಚಿ ಹೋಗಿದ್ದ ಕ್ರಸ್ಟ್ ಗೇಟ್ ನೀರಿನಲ್ಲಿ ಪತ್ತೆಯಾಗಿದೆ. ಜಲಾಶಯದ ಮುಂದೆ ಕೆಳಭಾಗದಲ್ಲಿ 19ನೇ ಕ್ರಸ್ಟ್ ಗೇಟ್ ಪತ್ತೆಯಾಗಿದೆ.

Leave a Comment

Your email address will not be published. Required fields are marked *