Ad Widget .

ಹತ್ತು ಎಸೆತಗಳಲ್ಲಿ 60 ರನ್ ಚಚ್ಚಿದ ಇಶಾನ್ ಕಿಶನ್| ಟೀಂ‌ ಇಂಡಿಯಾದಿಂದ ಹೊರಬಿದ್ದಿದ್ದಕ್ಕೆ ಸೇಡು‌ ತೀರಿಸಿಕೊಂಡರಾ ಕ್ರಿಕೆಟ್ ಸ್ಟಾರ್?

ಸಮಗ್ರ ನ್ಯೂಸ್: ಟೀಂ ಇಂಡಿಯಾದಿಂದ ಹೊರಬಿದ್ದ ಇಶಾನ್ ಕಿಶನ್ ಇದೀಗ ಟೀಕಾಕಾರರಿಗೆ ತಮ್ಮ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದಾರೆ. ತಮಿಳುನಾಡಿನಲ್ಲಿ ನಡೆಯುತ್ತಿರುವ ಬುಚ್ಚಿ ಬಾಬು ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಈ ಎಡಗೈ ಬ್ಯಾಟ್ಸ್‌ಮನ್ ಸ್ಫೋಟಕ ಶತಕ ಸಿಡಿಸಿದ್ದಾರೆ.

Ad Widget . Ad Widget .

ಈ ಟೂರ್ನಿಯಲ್ಲಿ ಜಾರ್ಖಂಡ್ ತಂಡದ ನಾಯಕ ಇಶಾನ್ ಕಿಶನ್ ಬುಚ್ಚಿ ಬಾಬು. ಇಶಾನ್ ಆರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದರು. ರಾಮ್‌ವೀರ್ ಗುರ್ಜರ್, ಅಧೀರ್ ಪ್ರತಾಪ್ ಸಿಂಗ್ ಮತ್ತು ಆಕಾಶ್ ರಾಜಾವತ್ ವಿರುದ್ಧ ಹೆಚ್ಚು ರನ್ ಗಳಿಸಿದ ಇಶಾನ್‌, ಈ ಮೂವರು ಬೌಲರ್‌ʼಗಳ ವಿರುದ್ಧ 8 ಸಿಕ್ಸರ್‌ ಬಾರಿಸಿದ್ದಾರೆ.

Ad Widget . Ad Widget .

ಇಶಾನ್ ಕಿಶನ್ ಕಳೆದ ವರ್ಷ ಡಿಸೆಂಬರ್ʼನಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದರು. ದಕ್ಷಿಣ ಆಫ್ರಿಕಾ ಪ್ರವಾಸವನ್ನು ಮಧ್ಯದಲ್ಲಿ ಬಿಟ್ಟು ಮರಳಿದ್ದರು. ಇದಾದ ನಂತರ, ಐಪಿಎಲ್‌ಗೂ ಮುನ್ನ ಅವರು ಎನ್‌ʼಸಿಎ ಬದಲಿಗೆ ಹಾರ್ದಿಕ್ ಪಾಂಡ್ಯ ಅವರೊಂದಿಗೆ ವಡೋದರಾದಲ್ಲಿ ತರಬೇತಿ ಪಡೆದ ಕಾರಣ ವಿವಾದಕ್ಕೆ ಒಳಗಾಗಿದ್ದರು. ಇದಾದ ಬಳಿಕ ಇಶಾನ್ ಐಪಿಎಲ್‌ʼನಲ್ಲಿ ಮಿಶ್ರ ಪ್ರದರ್ಶನ ನೀಡಿದ್ದರು. ಟಿ20 ವಿಶ್ವಕಪ್ ತಂಡದಲ್ಲಿ ಇಶಾನ್ ಆಯ್ಕೆಯಾಗಿರಲಿಲ್ಲ. ಇಶಾನ್ ದೇಶೀಯ ಕ್ರಿಕೆಟ್ ಆಡಿದಾಗ ಮಾತ್ರ ಟೀಂ ಇಂಡಿಯಾಗೆ ಮರಳಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿತ್ತು. ಇದೀಗ ಇಶಾನ್ ಬುಚ್ಚಿ ಬಾಬು ಟೂರ್ನಿಯಲ್ಲಿ ಆಡಲು ನಿರ್ಧರಿಸಿದ್ದಾರೆ.

Leave a Comment

Your email address will not be published. Required fields are marked *