ಮಂಗಳೂರು: ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಖಂಡಿಸಿ ಪ್ರತಿಭಟನೆ| ಶಾಂತಿಯುತ ಹೋರಾಟದಲ್ಲಿ ಹಲವು ಮಂದಿ ಭಾಗಿ

ಸಮಗ್ರ ನ್ಯೂಸ್: ಕೋಲ್ಕತ್ತಾದ ಆರ್.ಜಿ. ಕಾರ್ ಮೆಡಿಕಲ್ ಕಾಲೇಜಿನ ವೈದ್ಯ ವಿದ್ಯಾರ್ಥಿನಿಯನ್ನು ಸಾಮೂಹಿಕವಾಗಿ ಅತ್ಯಾಚಾರವೆಸಗಿ ಕೊಲೆ ಮಾಡಿರುವುದನ್ನು ಖಂಡಿಸಿ ನಗರದ ಭಾರತೀಯ ವೈದ್ಯಕೀಯ ಸಂಘ, ಸಮಾನ ಮನಸ್ಕ ಸಂಘಟನೆಗಳ ಆಶ್ರಯದಲ್ಲಿ ನಗರ ಐಎಂಎ ಭವನದಿಂದ ಜಿಲ್ಲಾಧಿಕಾರಿ ಕಚೇರಿಗೆ ಶಾಂತಿಯತ ಮೆರವಣಿಗೆ ನಡೆಯಿತು.

Ad Widget ... ..

ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ ಸಹಿತ, ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರು ಭಾಗವಹಿಸಿದ್ದರು.

Ad Widget

24 ಗಂಟೆಗಳ ಕಾಲ ನಡೆಯುವ ಮುಷ್ಕರದ ವೇಳೆ ಹೊರರೋಗಿ ವಿಭಾಗ, ವೈದ್ಯಕೀಯ ಸೇವೆಗಳು, ರೋಗಿಗಳ ದಾಖಲಾತಿ ಸಹಿತ ಪ್ರಮುಖ ಸೇವೆಗಳು ಬಂದ್ ಆಗಿದೆ. ಎಲ್ಲಾ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳು, ಮೆಡಿಕಲ್ ಕಾಲೇಜುಗಳು, ಕ್ಲೀನಿಕ್ ಗಳು ಬಂದ್ ಆಗಿದೆ.

Leave a Comment

Your email address will not be published. Required fields are marked *