ಚಿಕ್ಕೋಡಿ:- ಪ್ರವಾಹ ಸಂದರ್ಭದಲ್ಲಿ ನದಿ ತೀರದ ಗ್ರಾಮಗಳಲ್ಲಿ ಮೋಸಳೆಯೊಂದು ಕಾಣಿಸಿಕೊಂಡಿದ್ದರಿಂದ ಜನರಿಗೆ ಆತಂಕ ಹೆಚ್ಚಾಗಿತ್ತು.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರ, ಉಗಾರ, ಕುಸನಾಳ,ಗ್ರಾಮದ ಜನರು ಮೊಸಳೆಯಿಂದ ಭಯಭೀತರಾಗಿದ್ದರು .ಇಂದು ಆ ಮೊಸಳೆಯನ್ನ ಅರಣ್ಯಾಧಿಕಾರಿಗಳು ಸೆರೆ ಹಿಡಿದಿದ್ದು ನದಿ ತೀರದ ಜನರ ಆಂತಕ ದೂರಾಗಿದ್ದು ನಿಟ್ಟುಸಿರು ಬಿಡುವಂತಾಗಿದೆ.
ಅರಣ್ಯ ಅಧಿಕಾರಿಗಳಾದ ರಾಕೇಶ್ ಅರ್ಜುನವಾಡೆ, ಪ್ರಶಾಂತ್ ಗಂಗಾಧರ ಸೇರಿದಂತೆ ಹಲವು ಅರಣ್ಯ ಇಲಾಖೆ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಸತತ ಕಾರ್ಯಾಚರಣೆ ನಡೆಸಿ ಮೊಸಳೆಯನ್ನ ಸೆರೆ ಹಿಡಿದಿದ್ದಾರೆ.
ಅರಣ್ಯ ಅಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ