Ad Widget .

ಸವಣೂರು:ಎಸ್.ಡಿ.ಪಿ.ಐ ಸವಣೂರು ಗ್ರಾಮ ಸಮಿತಿ ವತಿಯಿಂದ 78ನೇ ಸ್ವಾತಂತ್ರೋತ್ಸವ ಕಾರ್ಯಕ್ರಮ

ಸಮಗ್ರ ನ್ಯೂಸ್: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸವಣೂರು ಗ್ರಾಮ ಸಮಿತಿ ವತಿಯಿಂದ 78ನೇ ಸ್ವಾತಂತ್ರೋತ್ಸವ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

Ad Widget . Ad Widget .

ಎಸ್.ಡಿ.ಪಿ.ಐ ಸವಣೂರು ಗ್ರಾಮ ಸಮಿತಿ ಅಧ್ಯಕ್ಷ ಇಕ್ಬಾಲ್ ಕೆನರಾ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಮತ್ತು ಸವಣೂರು ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ರಝಾಕ್ ಕೆನರಾ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಬೆಳ್ಳಾರೆ ಬ್ಲಾಕ್ ಅಧ್ಯಕ್ಷರು ಸವಣೂರು ಗ್ರಾಮ ಪಂಚಾಯತ್ ಸದಸ್ಯ ರಫೀಕ್. ಎಂ ಎ ಸಂದೇಶ ಭಾಷಣ ಮಾಡಿದರು.

Ad Widget . Ad Widget .

ಮುಖ್ಯ ಅತಿಥಿಗಳಾಗಿ ಚಾಪಲ್ಲ ಬದ್ರಿಯ ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಹಾಜೀ ಕಣಿಮಜಲು, ಪಣೆಮಜಲು ಜಮಾಅತ್ ಕಮೀಟಿ ಪ್ರಧಾನ ಕಾರ್ಯದರ್ಶಿ ಹಂಝ ಎಸ್. ಎ., ಬೆಳ್ಳಾರೆ ಬ್ಲಾಕ್ ಕೋಶಾಧಿಕಾರಿ ಇರ್ಷಾದ್ ಸರ್ವೆ, ಅಲ್ ನೂರ್ ಮುಸ್ಲಿಂ ಯೂತ್ ಫೆಡರೇಶನ್ ಅಧ್ಯಕ್ಷ ಝಕರಿಯ ಮಾಂತೂರು, ಬೆಳ್ಳಾರೆ ಬ್ಲಾಕ್ ಸಮಿತಿ ಸದಸ್ಯ ಯೂಸುಫ್ ಹಾಜೀ ಬೇರಿಕೆ, ಅಲ್ ನಜಾತ್ ಮುಸ್ಲಿಂ ಯೂತ್ ಫೆಡರೇಶನ್ ಪಣೆಮಜಲು ಅಧ್ಯಕ್ಷರು ಸವಣೂರು ಗ್ರಾಮ ಸಮಿತಿ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಸರ್ವೆ, ಅಲ್ಲದೆ ಪಕ್ಷದ ಕಾರ್ಯಕರ್ತರು, ಹಿತೈಷಿಗಳು ಉಪಸ್ಥಿತರಿದ್ದರು.

ಕಾರ್ಯಕ್ರವನ್ನು ಎಸ್ ಡಿ ಪಿ ಐ ಸವಣೂರು ಬೂತ್ ಅಧ್ಯಕ್ಷ ಯಾಕುಬ್ ಸವಣೂರು ಸ್ವಾಗತಿಸಿ, ಗ್ರಾಮ ಸಮಿತಿ ಕೋಶಾಧಿಕಾರಿ ಅಶ್ರಫ್ ಜನತಾ ವಂದಿಸಿದರು.

Leave a Comment

Your email address will not be published. Required fields are marked *