Ad Widget .

ವಿದ್ಯುತ್ ಶಾಕ್ ಗೆ ಧರ್ಮಗುರು ಬಲಿ

ಸಮಗ್ರ ನ್ಯೂಸ್: ವಿದ್ಯುತ್ ಶಾಕ್ ತಗುಲಿ ಧರ್ಮಗುರುವೊಬ್ಬರು ಮೃತಪಟ್ಟ ಘಟನೆ ಗುರುವಾರ ಸಂಜೆ ಮೃತಪಟ್ಟ ಘಟನೆ ಮುಳ್ಳೇರಿಯ ದಲ್ಲಿ ನಡೆದಿದೆ.

Ad Widget . Ad Widget .

ಮುಳ್ಳೇರಿಯಾ ಇನ್ಫೆಂಟ್ ಜೀಸಸ್ ಚರ್ಚ್ ನ ಧರ್ಮಗುರು ಫಾ. ಮ್ಯಾಥ್ಯೂ ಶಿನ್ಸ್ ಕುಡಿಲಿಲ್ ( 30) ಮೃತಪಟ್ಟವರು . ಇವರು ಮೂಲತಃ ಕಣ್ಣೂರು ಇರಿಟ್ಟಿ ನಿವಾಸಿಯಾಗಿದ್ದರು. ಜೊತೆಗಿದ್ದ ಧರ್ಮಗುರು ಫಾ. ಸೆಬಿನ್ ಜೋಸೆಫ್ ( 29) ಗಾಯಗೊಂಡಿದ್ದಾರೆ.

Ad Widget . Ad Widget .

ದೇಲಂಪಾಡಿ ಸಂತ ಮೇರಿಸ್ ಚರ್ಚ್ ಧರ್ಮಗುರು ಆಗಿದ್ದ ಫಾ . ಮ್ಯಾಥ್ಯೂ , ಗುರುವಾರ ಸಂಜೆ ಮುಳ್ಳೇರಿಯಾ ಚರ್ಚ್ ನಲ್ಲಿ ರಾಷ್ಟ್ರ ಧ್ವಜ ಅವರೋಹಣ ನಡೆಸುತ್ತಿದ್ದಾಗ ಧ್ವಜ ಅಳವಡಿಸಿದ್ದ ಕಬ್ಬಿಣದ ಪೈಪ್ ಸಮೀಪದ ಹೈಟೆನ್ಷನ್ ಲೈನ್ ಗೆ ತಗಲಿದೆ.

ವಿದ್ಯುತ್ ಶಾಕ್ ತಗಲಿ ನೆಲಕ್ಕೆ ಬಿದ್ದ ಇಬ್ಬರನ್ನೂ ಕೂಡಲೇ ಮುಳ್ಳೇರಿಯಾದ ಆಸ್ಪತ್ರೆಗೆ ತಲಪಿಸಿದರೂ ಫಾ. ಮ್ಯಾಥ್ಯೂ ಮೃತಪಟ್ಟಿದ್ದರು.

Leave a Comment

Your email address will not be published. Required fields are marked *