ಸಮಗ್ರ ನ್ಯೂಸ್: ಕಳೆದ ಆ.7ರಂದು ರಾಷ್ಟ್ರೀಯ ಹೆದ್ದಾರಿ 66ರ ಗೋವಾ- ಕಾರವಾರ ಸಂಪರ್ಕಿಸುವ ಕೋಡಿಬಾಗ್‌ನ ಕಾಳಿ ಬ್ರಿಡ್ಜ್ ನಲ್ಲಿ ಲಾರಿ ಚಾಲಕನ ಸಮೇತ ಬಿದ್ದಿದ್ದ ತಮಿಳುನಾಡು ಮೂಲದ ಲಾರಿಯನ್ನು ಎಂಟು ದಿನದ ನಂತರ ಕಾರ್ಯಾಚರಣೆ ನಡೆಸಿ ಇಂದು ಹೊರತೆಗೆಯಲಾಯಿತು.
ಗುರವಾರ ಬೆಳಗ್ಗೆ ಕಾರ್ಯಾಚರಣೆಗೆ ಐಆರ್‌ಬಿ ಕಂಪನಿಯು ಮೂರು ಕ್ರೇನ್ ಹಾಗೂ ಎರಡು ಬೋಟ್ ಬಳಸಿ ಕಾರ್ಯಾಚರಣೆಗೆ ಇಳಿದಿತ್ತು. ಆದರೆ ಲಾರಿ ಹೆಸ್ಕಾಂನ ತಂತಿಯ ಮೇಲೆ ತೇಲುತ್ತಿತ್ತು. ತಂತಿ ಕಟ್ ಮಾಡಿದಲ್ಲಿ ಲಾರಿ ಇನ್ನೂ ಕೆಳಕ್ಕೆ ಹೋಗುವ ಆತಂಕವಿತ್ತು. ಆದರೆ ಯಲ್ಲಾಪುರದ ಸನ್ನಿಸಿದ್ದಿ ಎಂಬುವರು ಯಾವುದೇ ಸಾಧನ ಬಳಸದೇ ನೀರಿನಾಳಕ್ಕೆ ಹೋಗಿ ರೋಪ್ ಕಟ್ಟಿ ಬಂದಿದ್ದರು.
ಇದರ ನಂತರ ಈಶ್ವರ್ ಮಲ್ಪೆ ತಂಡ ಮೂರು ರೋಪ್ ಕಟ್ಟಿ ಕೇಬಲ್ ತುಂಡರಿಸಿ ರೋಪ್ ಅನ್ನು ಟೋಯಿಂಗ್ ಮೂಲಕ ಎಳೆಸಿದ್ದರು. ದಡಕ್ಕೆ ನೂರು ಮೀಟರ್ ಇರುವಾಗ ಕಲ್ಲಿನ ಭಾಗದಲ್ಲಿಲಾರಿ ಸಿಲುಕಿಕೊಂಡಿತ್ತು. ಆದರೂ ಶತ ಪ್ರಯತ್ನ ನಡೆಸಿ ಸುಮಾರು 7.5 ಟನ್‌ಗೂ ಹೆಚ್ಚು ತೂಕದ ಲಾರಿಯನ್ನು ದಡಕ್ಕೆ ತಂದು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ.