ಬೈಂದೂರು::ಮುಸ್ಲಿಂ ಭಾಂಧವರಿಂದ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ

ಸಮಗ್ರ ನ್ಯೂಸ್: 78ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತಬೈಂದೂರು ಜಾಮೀಯ ಮಸೀದಿ ಹಾಗೂ ಅಂಜುಮಾನ್ ಶಬಾಬುಲ್ ವೆಲ್ಪೇರ್ ಟ್ರಸ್ಟಿನ ವತಿಯಿಂದ ಬೈಂದೂರು ಜಾಮೀಯ ಮಸೀದಿಯ ಮುಂಭಾಗದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯ ಆಚರಿಸಲಾಯಿತು.

Ad Widget ... ..

ಜಾಮೀಯ ಮಸೀದಿಯ ಇಮಾಮರಾದ ತಯ್ಯಬ್ ಹುಸೇನ್ ನೂರಿಯವರು ಧ್ವಜಾರೋಹಣ ನೆರವೇರಿಸಿದರು. ಈ ಶುಭಸಂದರ್ಭದಲ್ಲಿ ಬೈಂದೂರು ನೂರ್ ಮಸೀದಿಯ ಇಮಾಮ್ ಇಬ್ನು ಮಸೂದ್, ಮುಸ್ಲಿಂ ಮುಖಂಡರಾದ ನಾಗೂರು ನಾಸಿರ್ ಅಹ್ಮದ್, ನ್ಯೂ ಪಾದರಕ್ಷಾ ಫುಟ್’ವೇರ್ ಮಾಲಿಕರಾದ ತಲ್ಹಾ ಬೈಂದೂರು, ಹಾಗೂ ಅಂಜುಮಾನ್ ಶಬಾಬುಲ್ ಇಸ್ಲಾಂ ವೆಲ್ಪೇರ್ ಟ್ರಸ್ಟಿನ ಯು.ಎ.ಇ ಕಮಿಟಿ ಸದಸ್ಯರಾದ ತಾಹ ಬೈಂದೂರು ಹಾಗೂ ತನ್’ವೀರ್ ಬೈಂದೂರು ಉಪಸ್ಥಿತರಿದ್ದರು.

Ad Widget

ಅಲ್ಲದೆ, ಊರಿನ ಪುಟಾಣಿ ಮಕ್ಕಳು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಸಾರ್ವಜನಿಕರಿಗೆ ಸಿಹಿ ಹಾಗೂ ಉಪಹಾರ ವಿತರಿಸಲಾಯಿತು.

Leave a Comment

Your email address will not be published. Required fields are marked *