Ad Widget .

ಕೋಲಾರ: ಕತ್ತುಕೊಯ್ದು ಶಿಕ್ಷಕಿಯ ಹತ್ಯೆ| ಜೊತೆಗಿದ್ದ ಮಗಳ ಕೊಲೆಗೂ ಯತ್ನ

ಸಮಗ್ರ ನ್ಯೂಸ್: ಕೋಲಾರ ಸರಕಾರಿ ಶಾಲೆಯ ಶಿಕ್ಷಕಿಯೊಬ್ಬರನ್ನು ಕತ್ತು ಕೊಯ್ದು ಹತ್ಯೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ನಗರದ ಮುತ್ಯಾಲಪೇಟೆ ಬಡಾವಣೆಯಲ್ಲಿ ನಡೆದಿದೆ.

Ad Widget . Ad Widget .

ಹತ್ಯೆಯಾದ ಶಿಕ್ಷಕಿಯನ್ನು ದಿವ್ಯಶ್ರೀ (42) ಅವರನ್ನು ಮೂವರು ಸುಪಾರಿ ಕಿಲ್ಲರ್ಸ್ ಹಂತಕರಿಂದ ಈ ಕೃತ್ಯ ನಡೆದಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಹಲವು ದಿನಗಳಿಂದ ಶಿಕ್ಷಕಿಯ ಚಲನವಲನ ಗಮನಿಸಿ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಅವರು ಮುಳಬಾಗಿಲು ತಾಲ್ಲೂಕು ಮುಡಿಯನೂರು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದರು.

Ad Widget . Ad Widget .

ಮನೆಯಲ್ಲಿ ತನ್ನ ಮಗಳೊಂದಿಗೆ ಇದ್ದಾಗ ಕೊಲೆ ನಡೆದಿದೆ. ಈ ವೇಳೇ ಮಗಳನ್ನು ಕೊಲೆ ಮಾಡಲು ಯತ್ನ ನಡೆದಿದ್ದು, ಅದೃಷ್ಟವಶತ್ ಬಚಾವ್ ಆಗಿದ್ದಾಳೆ. ಮೃತರ ಪತಿ ಪದ್ಮನಾಭ್ ಉದ್ಯಮಿ ಆಗಿದ್ದಾರೆ. ಸುದ್ದಿ ತಿಳಿದ ತಕ್ಷಣ ಕೋಲಾರ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಹಾಗೂ ಮುಳಬಾಗಿಲು ಶಾಸಕ ಸಮೃದ್ದಿ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ‌. ಮುಳಬಾಗಿಲು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *