ಸಮಗ್ರ ನ್ಯೂಸ್: ಅಖಂಡ ಭಾರತ ಸಂಕಲ್ಪ ದಿನಾಚರಣೆ ಪ್ರಯುಕ್ತ ವಿಶ್ವ ಹಿಂದೂ ಪರಿಷತ್ ಭಜರಂಗದಳ ಮಾತೃ ಶಕ್ತಿ ದುರ್ಗಾವಾಹಿನಿ ಸುಳ್ಯ ಪ್ರಖಂಡ ಇದರ ಆಶ್ರಯದಲ್ಲಿ ಬೃಹತ್ ಪಂಜಿನ ಮೆರವಣಿಗೆಯು ಆ.14 ರಂದು ಸುಳ್ಯದಲ್ಲಿ ನಡೆಯಿತು.
ಬೃಹತ್ ಪಂಜಿನ ಮೆರವಣಿಗೆಯು ಶಾಸ್ತ್ರೀ ವೃತ್ತದಿಂದ ಪ್ರಾರಂಭಗೊಂಡು ಶ್ರೀ ಚೆನ್ನಕೇಶವ ದೇವಸ್ಥಾನದ ಎದುರು ಸಮಾಪನಗೊಂಡಿತು. ಕಾರ್ಯಕ್ರಮದ ದಿಕ್ಸೂಚಿ ಭಾಷಣಕಾರರಾಗಿ ಪ್ರದೀಪ್ ಸರಿಪಳ್ಳ ಮಾತನಾಡಿದರು.
ವೇದಿಕೆಯಲ್ಲಿ ಭಜರಂಗದಳ ಪ್ರಖಂಡ ಅಧ್ಯಕ್ಷ ಸೋಮಶೇಖರ ಫೈಕ,. ಮುಖ್ಯ ಅತಿಥಿ ನಿವೃತ್ತ ಯೋಧ ಬಿ ಎಸ್.ಎಫ್ ಎಂ ಬಿ ಬಾಲಕೃಷ್ಣ ನಿವೃತ್ತ ಯೋಧ, ರೂಪೇಶ್ ಪೂಜಾರಿಮನೆ ಬಜರಂಗದಳ ಜಿಲ್ಲಾ ಸಾಪ್ತಹಿಕ ಮಿಲನ್ , ಹರಿಪ್ರಸಾದ್ ಎಲಿಮಲೆ ಭಜರಂಗದಳ ಪ್ರಖಂಡ ಸಂಚಾಲಕ, ವರ್ಷಿತ್ ಚೊಕ್ಕಡಿ ಭಜರಂಗದಳ ಸುಳ್ಯ ನಗರ ಸಂಚಾಲಕ, ಉಪೇಂದ್ರ ಕಾಮತ್ ಅಧ್ಯಕ್ಷರು ಬಜರಂಗದಳ ಸುಳ್ಯನಗರ ಉಪಸ್ಥಿತರಿದ್ದರು.
ಮಾತೃ ಶಕ್ತಿ ಮತ್ತು ದುರ್ಗಾ ವಾಹಿನಿಯ ಪ್ರಖಂಡ ಸಂಯೋಜಕಿ ರೀನಾ ಚೋಡಿಪಣೆ , ಲತಾ ರೈ ಬೂಡು ಸಂಯೋಜಕಿ ಮಾತೃ ಶಕ್ತಿ ಸುಳ್ಯ ನಗರ , ಪ್ರೀತಿಕಾ ಚೆಮ್ನೂರು ಸಂಯೋಜಿಕಿ ದುರ್ಗವಾಹಿನಿ ಸುಳ್ಯ ನಗರ ಹಾಗೂ ಕಾರ್ಯಕರ್ತರು ಭಾಗವಹಿಸಿದರು.