Ad Widget .

ಭಾರತ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿ ಮಾರ್ನೆ ಮಾರ್ಕೆಲ್ ನೇಮಕ

ಸಮಗ್ರ ನ್ಯೂಸ್: ಭಾರತ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಮಾರ್ನೆ ಮಾರ್ಕೆ‌ಲ್ ಆಯ್ಕೆಯಾಗಿದ್ದಾರೆ. ಮಾರ್ನೆ ಮಾರ್ಕೆಲ್ ನೇಮಕಾತಿಯನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಖಚಿತಪಡಿಸಿದ್ದಾರೆ.

Ad Widget . Ad Widget .

ಸೆಪ್ಟೆಂಬರ್ 1 ರಿಂದ ಬೌಲಿಂಗ್ ಕೋಚ್ ಆಗಿ ಮೊರ್ಕೆಲ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ . ಬಾಂಗ್ಲಾದೇಶದ ವಿರುದ್ಧ ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಮೊರ್ಕೆಲ್ ಅವರು ಕೋಚ್ ಜವಾಬ್ದಾರಿ ಆರಂಭವಾಗಲಿದೆ.

Ad Widget . Ad Widget .

ಬೌಲಿಂಗ್ ಕೋಚ್ ನೇಮಕದಿಂದಾಗಿ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರೊಂದಿಗೆ ಮೊರ್ಕೆಲ್ ಅವರ ಪುನರ್ಮಿಲನವಾಗಿದೆ. ಏಕೆಂದರೆ, ಇವರಿಬ್ಬರು ಐಪಿಎಲ್‌ನಲ್ಲಿ ಮೂರು ಸೀಸನ್‌ಗಳಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಫ್ರಾಂಚೈಸಿಯಲ್ಲಿ ಸಹ ಆಟಗಾರರಾಗಿದ್ದರು. ಅಲ್ಲದೆ, ಲಖನೌ ಸೂಪರ್ ಜೈಂಟ್ಸ್‌ನ ಕೋಚಿಂಗ್ ವಿಭಾಗದಲ್ಲೂ ಒಟ್ಟಿಗೆ ಇದ್ದರು.

ಮೊರ್ಕೆಲ್ 2018ರಲ್ಲಿ 39 ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಮೊರ್ಕೆಲ್ ತಾಂತ್ರಿಕ ವಿಷಯಗಳಲ್ಲಿ ಚೆನ್ನಾಗಿ ಪರಿಣತರಾಗಿದ್ದಾರೆ. 2006-2018ರ ನಡುವೆ ದಕ್ಷಿಣ ಆಫ್ರಿಕಾ ಪರ 86 ಟೆಸ್ಟ್ ಮತ್ತು 117 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೆ, 44 ಟಿ20 ಪಂದ್ಯಗಳನ್ನೂ ಆಡಿದ್ದಾರೆ. ಮೊರ್ಕೆಲ್ ಅವರು ಕೋಚ್ ಆಗಿ ಅಪಾರ ಅನುಭವ ಹೊಂದಿದ್ದಾರೆ.

Leave a Comment

Your email address will not be published. Required fields are marked *