ಸಮಗ್ರ ನ್ಯೂಸ್: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಅನುಮಾನಾಸ್ಪದ ಸ್ಪೋಟ ವರದಿಯಾಗಿದೆ. ನಗರದ ಜೆಪಿ ನಗರ 24. ಮೇನ್ ಉಡುಪಿ ಉಪಹಾರ ಬಳಿ ಘಟನೆ ನಡೆದಿದೆ. ಈ ಸ್ಪೋಟ ಕೂಡ ರಾಮೇಶ್ವರಂ ಕೆಫೆ ಬ್ಲಾಸ್ಟ್ ರೀತಿಯಲ್ಲೇ ನಿಗೂಢವಾಗಿದೆ ಎನ್ನಲಾಗಿದೆ. ರಾಮೇಶ್ವರಂ ಕೆಫೆಯಲ್ಲೂ ಮೊದಲು ಸಿಲಿಂಡರ್ ಸ್ಫೋಟ ಎನ್ನಲಾಗಿತ್ತಾದರೂ, ಬಳಿಕ ಅದು ಭಯೋತ್ಪಾದಕ ಕೃತ್ಯ ಎನ್ನುವುದು ಖಚಿತವಾಗಿತ್ತು.
ಅದೇ ಮಾದರಿಯಲ್ಲಿ ಜೆಪಿ ನಗರದಲ್ಲಿ ನಡೆದಿರುವ ಸ್ಪೋಟವೂ ಕೂಡ ಅನುಮಾನಾಸ್ಪದವಾಗಿದೆ. ಜೆಪಿ ನಗರದ ಮನೆಯಲ್ಲಿ ಈ ಘಟನೆ ನಡೆದಿದ್ದು,ಪ್ರಕರಣದಲ್ಲಿ ಇಬ್ಬರಿಗೆ ಗಾಯವಾಗಿದೆ. ಸಮೀರ್ ಅಂಡ್ ಮೋಸಿನ್ ಇಬ್ಬರಿಗೆ ಗಾಯವಾಗಿದೆ. ಸೋಮವಾರ ಬೆಳಿಗ್ಗೆ 10 ಗಂಟೆಗೆ ಈ ಸ್ಪೋಟ ಸಂಭವಿಸಿದೆ. ಇಬ್ಬರೂ ಯುವಕರು ಉತ್ತರ ಪ್ರದೇಶದ ಮೂಲದವರು ಎನ್ನಲಾಗಿದೆ.
ಸ್ಪೋಟದ ತೀವ್ರತೆಗೆ ಮನೆಯ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದೆ. ಕುಕ್ಕರ್ ನಿಂದ ಸ್ಪೋಟ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಮನೆಯಲ್ಲಿ ಸುಟ್ಟ ವಯರ್‌ಗಳು ಕೂಡ ಪತ್ತೆಯಾಗಿದೆ. ಈ ಸ್ಪೋಟದ ಬಗ್ಗೆ ತನಿಖಾ ತಂಡಗಳು ಕೂಡ ಅನುಮಾನ ವ್ಯಕ್ತಪಡಿಸಿವೆ. ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಎನ್‌ಐಎ ಹಾಗೂ ಕೇಂದ್ರ ತನಿಖಾ ತಂಡ ಬೇಟಿ ಪರಿಶೀಲನೆ ನಡೆಸುತ್ತಿದೆ
ಎನ್ ಐ ಎ ಅಧಿಕಾರಿಗಳಿಗೆ ಸ್ಥಳೀಯ ಪೊಲೀಸರು ಕೂಡ ಸಾಥ್ ನೀಡಿದ್ದು, ಗಾಯಗೊಂಡ ಯುವಕರ ಪೂರ್ವಾಪರವನ್ನು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. ಬೆಂಗಳೂರಿಗೆ ಹೇಗೆ ಬಂದರು, ಏನು ಕೆಲಸ ಮಾಡುತ್ತಿದ್ದರು ಎನ್ನುವುದರ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ತೀವ್ರವಾಗಿ ಪರಿಶೀಲನೆ ಮಾಡಲಾಗಿದೆ. ಸ್ಪೋಟದ ವಸ್ತುಗಳನ್ನು ಕೂಡ ಪೊಲೀಸರು ಕಲೆ ಹಾಕುತ್ತಿದ್ದಾರೆ.ಈ ನಡುವೆ ರಾಮೇಶ್ವರಂ ಕೆಫೆ ಬ್ಲಾಸ್ಟ್ ಬಳಿಕ ಅದೇ ಮಾದರಿಯ ಬ್ಲಾಸ್ಟ್ ನಡೆಯಿತೇ ಎಂಬ ಅನುಮಾನ ಬಂದಿದೆ.