Ad Widget .

ಚಿಕ್ಕಮಗಳೂರು : ಹುಡುಗಿಗಾಗಿ ಬುರ್ಖಾ ಧರಿಸಿ ಬಂದ ಯುವಕ…!

ಸಮಗ್ರ ನ್ಯೂಸ್: ಯುವಕನೊಬ್ಬ ತನ್ನ ಹುಡುಗಿಗಾಗಿ ಬುರ್ಖಾ ಧರಿಸಿ ಬಂದ ಘಟನೆ ಚಿಕ್ಕಮಗಳೂರು ನಗರದ ಮಲ್ಲಂದೂರು ಎಂಬಲ್ಲಿ ಆ.13 ರಂದು ನಡೆದಿದೆ.

Ad Widget . Ad Widget .

ಬುರ್ಖಾ ತೊಟ್ಟು, ಬೆರಳಿಗೆ ನೈಲ್ ಪಾಲಿಶ್ ಹಾಕಿ ಶೃಂಗಾರ ಮಾಡಿಕೊಂಡಿದ್ದ ಪ್ರೇಮಿ ಚಿಕ್ಕಮಗಳೂರು ನಗರದಲ್ಲಿ ಓಡಾಡುತ್ತಿದ್ದ. ಅವನ ಕೈ, ಬೆರಳು, ಕಾಲುಗಳನ್ನು ನೋಡಿ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದರು.

Ad Widget . Ad Widget .

ಬಾಳೆಹೊನ್ನೂರು ಮೂಲದ ಯುವಕನಾಗಿದ್ದು, ತನ್ನ ಹುಡುಗಿಯನ್ನು ನೋಡಲು ಬುರ್ಖಾ ಧರಿಸಿ ಬಂದಿದ್ದಾಗಿ ಹೇಳಿಕೆ ನೀಡಿದ್ದಾನೆ. ಅಲ್ಲದೆ, ಬುರ್ಖಾ ಒಳಗೆ ಚಾಕು ಸಹ ಇಟ್ಟುಕೊಂಡಿದ್ದ ಎಂದು ತಿಳಿದುಬಂದಿದೆ. ಈ ಬಗ್ಗೆ ಚಿಕ್ಕಮಗಳೂರು ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *