ಜನನಿಬಿಡ ಪ್ರದೇಶದಲ್ಲಿ ಇಬ್ಬರು ಮಹಿಳೆಯರ ಜೊತೆ ಕಾರೊಳಗೆ ಯುವಕನ ಸರಸ

ಸಮಗ್ರ ನ್ಯೂಸ್: ಕಾರಿನೊಳಗೆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ, ಸೆಕ್ಸ್‌ನಲ್ಲಿ ತೊಡಗುವುದು ಹೀಗೆ ಹಲವಾರು ಘಟನೆಗಳು ಕೇಳಿಬಂದಿದೆ. ಇದೀಗ ಉತ್ತರ ಪ್ರದೇಶದ ಬಾರಾಬಂಕಿ ಪ್ರದೇಶದ ಲಕ್ನೋ-ಅಯೋಧ್ಯೆ ಎನ್‌ಎಚ್ 27 ರಲ್ಲಿ ಇನ್ನೋವಾ ಕಾರಿನೊಳಗೆ ಇಬ್ಬರು ಮಹಿಳೆಯರ ಜೊತೆ ಪುರುಷನೊಬ್ಬ ಸರಸಸಲ್ಲಾಪದಲ್ಲಿ ತೊಡಗಿರುವ ಆಘಾತಕಾರಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Ad Widget ... ..

ಸಿಟಿ ಕೊಟ್ವಾಲಿ ಪ್ರದೇಶದ ವ್ಯಾಪ್ತಿಯಲ್ಲಿರುವ ಸಫೇದಾಬಾದ್‍ನಲ್ಲಿರುವ ಕಾಳಿಕಾ ಹವೇಲಿ ರೆಸ್ಟೋರೆಂಟ್‍ನ ಪಾರ್ಕಿಂಗ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಯುಪಿ 33 ಎಎಲ್ 0011 ಲೈಸೆನ್ಸ್ ಬೋರ್ಡ್ ನಂಬರ್ ಅನ್ನು ಹೊಂದಿರುವ ಈ ಕಾರಿನೊಳಗೆ ವ್ಯಕ್ತಿಯೊಬ್ಬ ಇಬ್ಬರು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದನ್ನು ವಿಡಿಯೊದಲ್ಲಿ ತೋರಿಸಲಾಗಿದೆ. ಆಘಾತಕಾರಿ ಸಂಗತಿಯೆಂದರೆ, ಇಂತಹ ನಾಚಿಗೇಡಿನ ಕೃತ್ಯ ಕುಟುಂಬಗಳು ಆಗಾಗ್ಗೆ ಭೇಟಿ ನೀಡುವ ಸ್ಥಳದಲ್ಲಿ ಹಾಡಹಗಲೇ ನಡೆದಿವೆ ಎನ್ನಲಾಗಿದೆ.

Ad Widget

ಈ ವೈರಲ್ ವಿಡಿಯೊಗೆ ಪ್ರತಿಕ್ರಿಯಿಸಿದ ಬಾರಾಬಂಕಿ ಪೊಲೀಸರು ಎನ್‌ಎಚ್ -27ರ ರೆಸ್ಟೋರೆಂಟ್ ಮುಂದೆ ಈ ಘಟನೆ ನಡೆದಿದೆ ಎಂದು ದೃಢಪಡಿಸಿದ್ದಾರೆ. ಈ ವಾಹನವು ರಾಯ್ಬರೇಲಿ ಜಿಲ್ಲೆಯಲ್ಲಿ ನೋಂದಣಿಯಾಗಿದೆ ಎಂದು ತಿಳಿಸಿದ್ದಾರೆ. ಬಾರಾಬಂಕಿಯ ನಗರ ಮ್ಯಾಜಿಸ್ಟ್ರೇಟ್ ಈ ಕೃತ್ಯದಲ್ಲಿ ಭಾಗಿಯಾಗಿರುವವರ ಉದ್ದೇಶ ಮತ್ತು ಚಟುವಟಿಕೆಗಳ ಬಗ್ಗೆ ಮಾಹಿತಿ ತಿಳಿಯಲು ತನಿಖೆಯನ್ನು ಪ್ರಾರಂಭಿಸಿದ್ದಾರೆ, ತನಿಖೆಯ ಆಧಾರದ ಮೇಲೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Leave a Comment

Your email address will not be published. Required fields are marked *