Ad Widget .

ರೈಲು‌‌ ಹಳಿಗಳ ಮೇಲೆ ಗುಡ್ಡ ಕುಸಿತದ ಮಣ್ಣು ತೆರವು| ಮಂಗಳೂರು – ಸಕಲೇಶಪುರ ರೈಲು ಸಂಚಾರ ಪುನರಾರಂಭ

ಸಮಗ್ರ ನ್ಯೂಸ್: ಸಕಲೇಶಪುರ ಟು ಬಾಳ್ಳುಪೇಟೆ ಮಾರ್ಗಮಧ್ಯದ ರೈಲು ಹಳಿಗಳ ಮೇಲೆ ಭೂ ಕುಸಿತ ಉಂಟಾಗಿ ಸಂಚಾರಕ್ಕೆ ಅಡ್ಡಿಯಾಗಿತ್ತು. ಭೂ ಕುಸಿತದ ಮಣ್ಣನ್ನು ತೆರವುಗೊಳಿಸಲಾಗಿದ್ದು, ಸಂಚಾರ ಸುರಕ್ಷತೆಯ ಪರೀಕ್ಷೆಯನ್ನು ನಡೆಸಲಾಗಿದೆ. ಹೀಗಾಗಿ ನಾಳೆ(ಆ.14)ರಿಂದ ಈ ಮಾರ್ಗದಲ್ಲಿ ರೈಲುಗಳ ಸಂಚಾರ ಪುನರಾರಂಭಗೊಳಿಸಲಾಗುತ್ತಿದೆ.

Ad Widget . Ad Widget .

ಈ ಕುರಿತಂತೆ ನೈರುತ್ಯ ರೈಲ್ವೆಯ ಮೈಸೂರು ವಿಭಾಗವು ಮಾಹಿತಿ ನೀಡಿದ್ದು, ಸಕಲೇಶಪುರ-ಬಳ್ಳುಪೇಟೆ ನಿಲ್ದಾಣಗಳ ನಡುವೆ ಭೂಕುಸಿತಕ್ಕೆ ಸಂಬಂಧಿಸಿದಂತೆ, ಹಳಿಯನ್ನು ಪುನಃಸ್ಥಾಪಿಸಲಾಗಿದೆ ಮತ್ತು ರೈಲು ಕಾರ್ಯಾಚರಣೆಗೆ ಯೋಗ್ಯವಾಗಿದೆ ಎಂದು ಪ್ರಮಾಣೀಕರಿಸಲಾಗಿದೆ ಎಂದು ತಿಳಿಸಿದೆ.

Ad Widget . Ad Widget .

ದಿನಾಂಕ 11.08.2024ರ ನೈರುತ್ಯ ರೈಲ್ವೆ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ಬಿಡುಗಡೆ ಮಾಡಿದ್ದಂತ ಬುಲೆಟಿನ್ ಸಂಖ್ಯೆ-7 ರಲ್ಲಿ ಸಂಚಾರವನ್ನು ರದ್ದುಗೊಳಿಸಲಾಗಿದ್ದ ಎಲ್ಲಾ ರೈಲುಗಳನ್ನು ಆ.14ರಿಂದ ಪುನರಾರಂಭಗೊಳಿಸಲಾಗುತ್ತಿದೆ ಎಂದು ತಿಳಿಸಿದೆ. ಆದರೇ ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್-ವಿಜಯಪುರ ಎಕ್ಸ್ಪ್ರೆಸ್ ವಿಶೇಷ ರೈಲು ದಿನಾಂಕ 14.08.2024 ರಂದು ರದ್ದಾಗಿದೆ ಎಂದು ಹೇಳಿದೆ.

Leave a Comment

Your email address will not be published. Required fields are marked *