ಶಿರೂರು ಗುಡ್ಡ ಕುಸಿತ ಪ್ರಕರಣ| ನಾಪತ್ತೆಯಾಗಿದ್ದ ಲಾರಿಯ ಅವಶೇಷಗಳು ಪತ್ತೆ

ಸಮಗ್ರ ನ್ಯೂಸ್: ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭೂಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವಳಿ ನದಿಯಲ್ಲಿ ಸ್ಕೂಬಾ ಡ್ರೈವಿಂಗ್ ವೇಳೆ ನಾಪತ್ತೆಯಾದ ಲಾರಿಯ ಜಾಕ್ ಪತ್ತೆಯಾಗಿದ್ದು, ಇದು ನಮ್ಮದೇ ಲಾರಿಯ ಬಿಡಿಭಾಗ ಎಂದು ಲಾರಿ ಮಾಲೀಕರು ಖಚಿತಪಡಿಸಿದ್ದಾರೆ.

Ad Widget ... ..

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜುಲೈ 16ರಂದು ಗುಡ್ಡ ಕುಸಿತ ಸಂಭವಿಸಿತ್ತು. ಘಟನೆಯಲ್ಲಿ 12 ಜನರು ನಾಪತ್ತೆಯಾಗಿದ್ದು, ಅವರಲ್ಲಿ 8 ಜನರ ಮೃತದೇಹ ಪತ್ತೆಯಾಗಿದೆ. ಆದರೆ ಉಳಿದ ಮೂವರ ಸುಳಿವು ಸಿಗುತ್ತಿಲ್ಲ.

Ad Widget

ಮೂವರ ಪತ್ತೆಗಾಗಿ ಹಾಗೂ ಕೇರಳ ಮೂಲದ ಲಾರಿ ಪತ್ತೆಗಾಗಿ ಗುಡ್ಡ ಕುಸಿತದ ಅವಶೇಷಗಳಡಿ ಹಾಗೂ ಗಂಗಾವಳಿ ನದಿಯಲ್ಲಿ ಕಳೆದ 13 ದಿನಗಳಿಂದ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.

Leave a Comment

Your email address will not be published. Required fields are marked *