Ad Widget .

ಸುಬ್ರಹ್ಮಣ್ಯ: ಕೆಎಸ್ಎಸ್ ಕಾಲೇಜಿನ ಉಪನ್ಯಾಸಕ ವಿನ್ಯಾಸ್ ಹೊಸೋಳಿಕೆ ಅವರಿಗೆ ಮಂಗಳೂರು ವಿ.ವಿ ಯಿಂದ ಪಿ ಎಚ್ ಡಿ ಪದವಿ

ಸಮಗ್ರ ನ್ಯೂಸ್: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಕಾಲೇಜಿನ ವಾಣಿಜ್ಯಶಾಸ್ತ್ರ ಮತ್ತು ಉದ್ಯಮ ಆಡಳಿತ ವಿಭಾಗದ ಉಪನ್ಯಾಸಕ ವಿನ್ಯಾಸ್ ಹೊಸೋಳಿಕೆ ಅವರು ಮಂಡಿಸಿದ “ಮಾರ್ಕೆಟಿಂಗ್ ಸ್ಟ್ರಾಟಜಿಸ್ ಆಫ್ ಸೋಷಿಯಲ್ ಎಂಟರ್ಪ್ರೈಸಸ್ – ಎ ಸ್ಟಡಿ ವಿಥ್ ಸೆಲೆಕ್ಟ್ ಸೋಶಿಯಲ್ ಎಂಟರ್ಪ್ರೈಸಸ್” ಎಂಬ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿಯನ್ನು ನೀಡಿದೆ.

Ad Widget . Ad Widget .

ಅವರು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ನಿವೃತ್ತ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು ಪ್ರಾಂಶುಪಾಲರು ಆದ ಪ್ರೋ. ಡಾ. ಉದಯ್ ಕುಮಾರ್ ಇರ್ವತ್ತೂರು ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “ಮಾರ್ಕೆಟಿಂಗ್ ಸ್ಟ್ರಾಟಜಿಸ್ ಆಫ್ ಸೋಷಿಯಲ್ ಎಂಟರ್ಪ್ರೈಸಸ್ – ಎ ಸ್ಟಡಿ ವಿಥ್ ಸೆಲೆಕ್ಟ್ ಸೋಶಿಯಲ್ ಎಂಟರ್ಪ್ರೈಸಸ್” ಎಂಬ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿಯನ್ನು ನೀಡಿದೆ.

Ad Widget . Ad Widget .

ಇವರು ಉಪನ್ಯಾಸಕರ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿಯು ಉತ್ತೀರ್ಣಗೊಂಡು, ಪ್ರಸ್ತುತ ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರು ನಿವೃತ್ತ ಅಂಚೆ ಉಪ ಪಾಲಕ ದಾಮೋದರ ಗೌಡ ಹೊಸೋಳಿಕೆ ಮತ್ತು ದಿ. ದಿನಮಣಿ ದಂಪತಿಗಳ ಪುತ್ರ.

Leave a Comment

Your email address will not be published. Required fields are marked *