ಮೂಡುಬಿದಿರೆ: ಪ್ರೇಮವೈಫಲ್ಯ ಹಿನ್ನೆಲೆ| ಕಾಲೇಜು ವಿದ್ಯಾರ್ಥಿನಿಗೆ ಕತ್ತರಿಯಿಂದ ಇರಿದ ಭಗ್ನಪ್ರೇಮಿ

ಸಮಗ್ರ ನ್ಯೂಸ್: ಪ್ರೇಮ ವೈಫಲ್ಯದಿಂದ ಯುವಕನೋರ್ವ ಪಿಯುಸಿ ವಿದ್ಯಾರ್ಥಿನಿಗೆ ಕತ್ತರಿಯಿಂದ ಇರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ನಡೆದಿದೆ. ತುಮಕೂರು ಮೂಲದ ಮಂಜುನಾಥ್ ಎಂಬಾತ ಈ ಕೃತ್ಯ ಎಸಗಿದ್ದಾಗಿ ತಿಳಿದುಬಂದಿದೆ.

Ad Widget ... ..

ಮಂಜುನಾಥ್ ಆಳ್ವಾಸ್ ಕಾಲೇಜಿನಲ್ಲಿ ಓದುತ್ತಿದ್ದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದನು. ಇದಕ್ಕೆ ಆಕೆ ಒಪ್ಪದ ಹಿನ್ನೆಲೆ ಕತ್ತರಿಯಿಂದ ಹೊಟ್ಟೆಗೆ ಇರಿದಿದ್ದಾನೆ.

Ad Widget

ಗಂಭೀರವಾಗಿ ಗಾಯಗೊಂಡ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೊಲೆ ಯತ್ನ ಆರೋಪದಡಿ ಮೂಡುಬಿದಿರೆ ಪೊಲೀಸರು ಮಂಜುನಾಥ್ ನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *