Ad Widget .

ಮಂಗಳೂರು: ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಮುಸ್ಲಿಂ ಯುವಕನೊಂದಿಗೆ ದಾಂಪತ್ಯಕ್ಕೆ!!

ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಹಿಂದೂ ಧರ್ಮದ ವಿದ್ಯಾರ್ಥಿನಿಯೊಬ್ಬಳು ಕೇರಳದಲ್ಲಿ ಅನ್ಯ ಧರ್ಮದ ಯುವಕನೊಂದಿಗೆ ವಿವಾಹವಾದ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

Ad Widget . Ad Widget .

ಘಟನೆ ಏನು?: ವಿದ್ಯಾರ್ಥಿನಿ ವಿಸ್ಮಯಳನ್ನು ಜೂ.30ರಂದು ಉಳ್ಳಾಲದಿಂದ ಕಾಸರಗೋಡು ವಿದ್ಯಾನಗರ ನಿವಾಸಿ ಮುಹಮ್ಮದ್‌ ಅಶ್ಫಕ್ ಅಪಹರಿಸಿದ್ದ ಬಗ್ಗೆ ವಿದ್ಯಾರ್ಥಿನಿಯ ತಂದೆ ವಿನೋದ್‌ ಅವರು ಮಂಗಳೂರಿನ ಪಾಂಡೇಶ್ವರ ಪೊಲೀಸರಿಗೆ ದೂರು ನೀಡಿದ್ದರು. ‌ಮಗಳನ್ನು ಮತಾಂತರಗೊಳಿಸುವುದಕ್ಕಾಗಿ ಅಶ್ಪಕ್‌ ಮತ್ತು ಆತನ ತಂಡ ಅಪಹರಣ ನಡೆಸಿದೆ ಎಂದು ದೂರಿನಲ್ಲಿ ಹೇಳಿದ್ದರು.

Ad Widget . Ad Widget .

ಅಶ್ಫಕ್ ಈಗಾಗಲೇ ಒಂದು ವಿವಾಹವಾಗಿದ್ದು ಈತನ ಮೇಲೆ 15ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ ಎಂದು ದೂರಿನಲ್ಲಿ ತಿಳಿಸಿದ್ದರು. ಘಟನೆ ನೆನೆದು ವಿಸ್ಮಯ ತಂದೆ ಮಾಧ್ಯಮ, ವಿಶ್ವ ಹಿಂದೂ ಪರಿಷತ್‌ ಪದಾಧಿಕಾರಿಗಳ ಎದುರು ಕಣ್ಣೀರು ಹಾಕಿ ಮಗಳನ್ನು ರಕ್ಷಿಸುವಂತೆ ಮನವಿ ಮಾಡಿದ್ದರು.

ಇದು ಮತ್ತೊಂದು ಲವ್‌ ಜೆಹಾದ್‌ ಪ್ರಕರಣವಾಗಿದ್ದು ತನಿಖೆ ನಡೆಸಬೇಕೆಂದು ವಿಎಚ್‌ಪಿ ಆಗ್ರಹಿಸಿತ್ತು. ಬಳಿಕ ಈಕೆಯನ್ನು ಪೊಲೀಸರು ಪತ್ತೆ ಹಚ್ಚಿ ಸಲಹಾ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದರು. ಇದೀಗ ಆಕೆಯನ್ನು ಅಶ್ಫಕ್ ಕೇರಳಕ್ಕೆ ಕರೆದೊಯ್ದು ವಿವಾಹವಾಗಿದ್ದಾನೆ.

Leave a Comment

Your email address will not be published. Required fields are marked *