ನಾಗರ ಪಂಚಮಿ ದಿನವೇ ಹಾವು ಕಚ್ಚಿ ಬಾಣಂತಿ ಸಾವು

ಸಮಗ್ರ ನ್ಯೂಸ್: ಇಂದು ನಾಗರ ಪಂಚಮಿ ಹಬ್ಬ ಆದರೆ ಈ ಹಬ್ಬದಂದೇ ಹಾವು ಕಚ್ಚಿ ಬಾಣಂತಿಯೊಬ್ಬರು ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹುತ್ತಾದಿಂಬ ಗ್ರಾಮದಲ್ಲಿ ನಡೆದಿದೆ.

Ad Widget ... ..

ಗದ್ದೆಯಲ್ಲಿ ಮೇವು ತರಲು ತೆರಳಿದ್ದ ವೇಳೆ ಹಾವು ಕಚ್ಚಿದ್ದರಿಂದ ಈ ದುರಂತ ಸಂಭವಿಸಿದೆ. ರಂಜಿತಾ (22) ಮೃತಪಟ್ಟ ಯುವತಿ. ಮೇವು ತರಲು ಹೋಗಿದ್ದ ವೇಳೆ ಪೊದೆಯಲ್ಲಿದ್ದ ಹಾವು, ಬಾಣಂತಿಗೆ ಕಚ್ಚಿದೆ. ಆದರೆ, ಈ ಬಗ್ಗೆ ಯುವತಿ ಗಮನಕ್ಕೆ ಬಂದಿಲ್ಲ. ಕೆಲಹೊತ್ತಿನ ಬಳಿಕ ಕುಟುಂಬಸ್ಥರು ನೋಡಿದಾಗ ಗದ್ದೆಯಲ್ಲಿ ರಂಜಿತಾ ಕುಸಿದು ಬಿದ್ದಿದ್ದಳು. ತಕ್ಷಣ ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ರಂಜಿತಾ ಮೃತಪಟ್ಟಿದ್ದಾಳೆ.

Ad Widget

ಮೃತ ರಂಜಿತಾ 3 ವರ್ಷದ ಹೆಣ್ಣು ಹಾಗೂ 4 ತಿಂಗಳ ಹಸುಗೂಸು ಹೊಂದಿದ್ದಳು. ಆಸ್ಪತ್ರೆಯ ಶವಾಗಾರದ ಬಳಿ ಮೃತಳ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

Leave a Comment

Your email address will not be published. Required fields are marked *