Ad Widget .

ಶೋಭಿತಾ ಜೊತೆ ನಾಗ ಚೈತನ್ಯ ಎಂಗೇಜ್ಮೆಂಟ್: ಮಾಜಿ ಪತ್ನಿ ವಿರುದ್ಧ ಸೇಡು ತೀರಿಸಿಕೊಂಡ್ರಾ ನಟ..?

ಸಮಗ್ರ ನ್ಯೂಸ್: ಟಾಲಿವುಡ್ ನಟ ನಾಗ ಚೈತನ್ಯ ಅವರು ಇದೀಗ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇಷ್ಟು ದಿನ ಗುಟ್ಟಾಗಿ ಡೇಟಿಂಗ್ ಮಾಡುತ್ತಿದ್ದ ಶೋಭಿತಾ ಹಾಗೂ ನಾಗ ಚೈತನ್ಯ ಅವರು ಆಗಸ್ಟ್ 8ರಂದು ಎಂಗೇಜ್ ಆದರು. ಆ ಮೂಲಕ ನಾಗ ಚೈತನ್ಯ ಅವರು ಎರಡನೇ ಮದುವೆಗೆ ಸಜ್ಜಾಗಿದ್ದಾರೆ.

Ad Widget . Ad Widget .

ಈ ಮೊದಲು ಸಮಂತಾ ರುತ್ ಪ್ರಭು ಜೊತೆ ನಾಗ ಚೈತನ್ಯ ಮದುವೆ ಆಗಿದ್ದರು. ಆದರೆ ಸಂಸಾರದಲ್ಲಿ ಬಿರುಕು ಮೂಡಿದ್ದರಿಂದ ಅವರು ವಿಚ್ಛೇದನ ಪಡೆದರು. ಇವರಿಬ್ಬರೂ ಕೆಲ ವರ್ಷಗಳ ಹಿಂದೆ ‘ಏ ಮಾಯಾ ಚೇಸಾವೆ’ ಸಿನಿಮಾ ಮಾಡುವಾಗ ಆ.8ರ ದಿನಾಂಕದಂದು ನಾಗಚೈತನ್ಯಗೆ ಸಮಂತಾ ಪ್ರೇಮ ನಿವೇದನೆ ಮಾಡಿದ್ದರು. ಹಾಗಾಗಿ ಈ ದಿನ ಇಬ್ಬರ ಪಾಲಿಗೆ ವಿಶೇಷವಾಗಿತ್ತು. ಈಗ ಬೇಕಂತಲೇ ಮಾಜಿ ಪತ್ನಿ ವಿರುದ್ಧ ಸೇಡು ತೀರಿಸಿಕೊಳ್ಳಲು ನಟ ಆಗಸ್ಟ್‌ 8ರಂದೇ ಶೋಭಿತಾ ಧೂಳಿಪಾಲ ಜತೆ ಎಂಗೇಜ್‌ ಆಗಿದ್ದಾರೆ ಎಂದು ಮಾತುಗಳು ಕೇಳಿ ಬರುತ್ತಿವೆ.

Ad Widget . Ad Widget .

ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರು  ಹೈದರಾಬಾದ್‌ನಲ್ಲಿ ನಾಗಾರ್ಜುನ ಅವರ ಮನೆಯಲ್ಲಿ ಎಂಗೇಜ್‌ಮೆಂಟ್‌ ಮಾಡಿಕೊಂಡಿದೆ. ನಿಶ್ಚಿತಾರ್ಥ ಸಮಾರಂಭದ ಫೋಟೋಗಳನ್ನು ಸೂಪರ್‌ಸ್ಟಾರ್ ನಾಗಾರ್ಜುನ ಹಂಚಿಕೊಂಡು ಜೋಡಿಗೆ ಆಶೀರ್ವದಿಸಿದರು.

ನಾಗ ಚೈತನ್ಯ ಮತ್ತು ಶೋಭಿತಾ ಅವರು ಈವರೆಗೂ ಯಾವುದೇ ಸಿನಿಮಾದಲ್ಲಿ ಜೊತೆಯಾಗಿ ನಟಿಸಿಲ್ಲ. ಹಾಗಿದ್ದರೂ ಕೂಡ ಅವರಿಬ್ಬರ ನಡುವೆ ಆತ್ಮೀಯತೆ ಬೆಳೆಯಿತು. ಹಲವು ಸಂದರ್ಭಗಳಲ್ಲಿ ಅವರಿಬ್ಬರು ಜೊತೆಯಾಗಿ ಸುತ್ತಾಡಿದ್ದು ಜನರ ಗಮನಕ್ಕೆ ಬಂತು. ಆದರೆ ಇವರಿಬ್ಬರೂ ಆರಂಭದಲ್ಲಿ ತಮ್ಮಿಬ್ಬರ ರಿಲೇಷನ್ಶಿಪ್ ಬಗ್ಗೆ ಸಿಕ್ಕಾಪಟ್ಟೆ ಗೌಪ್ಯತೆ ಕಾಪಾಡಿಕೊಂಡಿದ್ದ ಇದೀಗ ಎಂಗೇಜ್ಮೆಂಟ್ ಆಗಿ ಸುದ್ದಿಯಾಗಿದ್ದಾರೆ.

Leave a Comment

Your email address will not be published. Required fields are marked *