Ad Widget .

ಮದುವೆಗೆ ಮನೆಯಲ್ಲಿ ವಿರೋಧ: ನೇಣುಬಿಗಿದುಕೊಂಡ ಪ್ರೇಮಿಗಳು

ಸಮಗ್ರ ನ್ಯೂಸ್: ಮದುವೆಗೆ ಮನೆಯಲ್ಲಿ ಒಪ್ಪಲಿಲ್ಲವೆಂದು ಪ್ರೇಮಿಗಳಿಬ್ಬರು ಒಂದೇ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲ್ಲೂಕಿನ ನಂದಗಾಂವ ಗ್ರಾಮದಲ್ಲಿ ನಡೆದಿದೆ. ಸಚಿನ್ ದಳವಾಯಿ(22), ಪ್ರಿಯಾ ಮಡಿವಾಳರ(19) ಮೃತ ಪ್ರೇಮಿಗಳು.

Ad Widget . Ad Widget .

ಇವರಿಬ್ಬರ ಜಾತಿ ಬೇರೆಯಾಗಿದ್ದರಿಂದ ಹುಡುಗನ ಮನೆಯವರು ಅಂತರ್ಜಾತಿ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಮನನೊಂದ ಜೋಡಿ ಸಾವಿನ ಹಾದಿ ಹಿಡಿದಿದೆ. ಸಚಿನ್‌ ದಳವಾಯಿ, ಪ್ರಿಯಾ ಮಡಿವಾಳರ ಬಹಳ ದಿನಗಳಿಂದ ಪ್ರೀತಿಸುತ್ತಿದ್ದರು. ಇಬ್ಬರು ಪರಸ್ಪರ ಮದುವೆಯಾಗಿ ಹೊಸ ಜೀವನ ಪ್ರಾರಂಭಿಸಬೇಕು ಎಂದು ನಿರ್ಧಾರ ತೆಗೆದುಕೊಂಡಿದ್ದರು. ಆದರೆ ಮದುವೆಗೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಈ ವಿಷಯವನ್ನು ಸಚಿನ್‌, ತಮ್ಮ ಪ್ರೇಯಸಿ ಪ್ರಿಯಾಳಿಗೆ ತಿಳಿಸಿದ್ದಾನೆ. ಇದರಿಂದ ಮನನೊಂದ ಪ್ರೇಮಿಗಳು ಗುರುವಾರ ರಾತ್ರಿ ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *