ಸಮಗ್ರ ನ್ಯೂಸ್: ವಿನೇಶ್ ಪೋಗಟ್ ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳೆಯ 50 ಕೆಜಿ ರೆಸ್ಲಿಂಗ್‌ನಲ್ಲಿ ಸೆಮಿಫೈನಲ್‌ಗೇರುವ ಮೂಲಕ ಪದಕದ ಭರವಸೆ ಮೂಡಿಸಿದ್ದಾರೆ. ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಆಕೆ ಹಾಲಿ ವಿಶ್ವಚಾಂಪಿಯನ್‌ಅನ್ನು ಸೋಲಿಸಿದ ರೀತಿಯೇ ಒಲಿಂಪಿಕ್ಸ್ ಚಿನ್ನ ಗೆಲುವಿಗಿಂತ ಮಹತ್ವದ್ದು ಎಂದು ಬಿಂಬಿಸಲಾಗುತ್ತದೆ.
ವಿನೇಶ್ ಪೋಗಟ್ ಚಿನ್ನದ ಭರವಸೆಯನ್ನು ಮೂಡಿಸಿರುವ ನಡುವೆಯೇ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಜರಂಗ್ ಪೂನಿಯಾ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ರೆಸ್ಲಿಂಗ್ ಫೆಡರೇಷನ್‌ನಲ್ಲಿ ಬದಲಾವಣೆ ಆಗಬೇಕು. ಮಾಜಿ ಅಧ್ಯಕ್ಷರಾಗಿರುವ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಾಗಬೇಕು ಎಂದು ಆಗ್ರಹಿಸಿ ವಿನೇಶ್ ಪೋಗಟ್, ಸಾಕ್ಷಿ ಮಲೀಕ್ ಹಾಗೂ ಭಜರಂಗ್ ಪೂನಿಯಾ ಮಾಡಿದ ಹೋರಾಟ ಅಷ್ಟಿಷ್ಟಲ್ಲ. ಕ್ರೀಡಾ ಸಚಿವಾಲಯ, ಕೇಂದ್ರ ಸರ್ಕಾರ ಇವರೆಲ್ಲರ ಮಧ್ಯಪ್ರವೇಶದಿಂದಲೂ ತಣ್ಣಗಾಗದ ಇವರ ಹೋರಾಟ ಕನೆಗೆ ಬೀದಿಗೆ ಇಳಿದಿತ್ತು. ಚಾಂಪಿಯನ್ ಅಥ್ಲೀಟ್‌ಗಳು ದೇಶದ ಪೊಲೀಸರು ಎಸೆದು ಹೊರಹಾಕಿದ್ದರು. ಈ ಎಲ್ಲಾ ಹೋರಾಟ, ಅವಮಾನಗಳ ನಡುವೆ ದೇಶವನ್ನು ಪ್ರತಿನಿಧಿಸಿ ವಿನೇಶ್ ಇಂದು ಮಹಾ ಪದಕದ ಕನಸಿನಲ್ಲಿದ್ದಾರೆ. ಈ ನಿಟ್ಟಿನಲ್ಲಿ ಭಜರಂಗ್ ಪೂನಿಯಾ ಮಾಡಿರುವ ಟ್ವೀಟ್ ವೈರಲ್ ಆಗಿದೆ.
‘ವಿನೇಶ್ ಫೋಗಟ್ ಇಂದು ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನು ಗೆದ್ದ ಭಾರತದ ಸಿಂಹಿಣಿ. 4 ಬಾರಿ ವಿಶ್ವ ಚಾಂಪಿಯನ್ ಮತ್ತು ಹಾಲಿ ಒಲಿಂಪಿಕ್ ಚಾಂಪಿಯನ್ ಅನ್ನು ಅವರು ಸೋಲಿಸಿದ್ದಾರೆ. ಅದರ ನಂತರ ಅವರು ಕ್ವಾರ್ಟರ್ ಫೈನಲ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್‌ನನ್ನು ಸೋಲಿಸಿದ್ದಾರೆ. ಆದರೆ ನಾನು ನಿಮಗೆ ಒಂದು ವಿಷಯ ಹೇಳುತ್ತೇನೆ, ಈ ಹುಡುಗಿಯನ್ನು ತನ್ನ ದೇಶದಲ್ಲಿಯೇ ಒದ್ದು ತುಳಿದು ಹಾಕಿದ್ದರು. ಈ ಹುಡುಗಿಯನ್ನು ತನ್ನ ದೇಶದಲ್ಲಿ ಬೀದಿಗಳಲ್ಲಿ ಎಳೆಯಲಾಗಿತ್ತು. ಈ ಹುಡುಗಿ ಈಗ ಜಗತ್ತನ್ನು ಗೆಲ್ಲಲು ಹೊರಟಿದ್ದಾಳೆ ಆದರೆ ಈ ದೇಶದ ವ್ಯವಸ್ಥೆಗೆ ಅವಳು ಸೋತಿದ್ದಾಳೆ’ ಎಂದು ಭಜರಂಗ್ ಪೂನಿಯಾ ಬರೆದಿದ್ದಾರೆ.