ಸಮಗ್ರ ನ್ಯೂಸ್: ಉತ್ತರ ಕನ್ನಡ ಜಿಲ್ಲೆಯ ಅಲ್ಲಲ್ಲಿ ನಾನಾ ಕಾರಣಗಳಿಂದ ಮಳೆಯ ಅವಾಂತರ, ಗುಡ್ಡ ಕುಸಿತ,ಅವಘಡಗಳು ಸಂಭವಿಸುತ್ತಲೇ ಇದ್ದು ಹೆದ್ದಾರಿ ಸಂಚಾರಿಗಳು ತಮ್ಮ ಜೀವವನ್ನು ಕೈಯಲ್ಲಿಯೇ ಹಿಡಿದು ಒಡಾಡುವಂತಾಗಿದೆ.
ಕಾರವಾರ ನಗರ ವ್ಯಾಪ್ತಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ಕಾಳಿ ನದಿ ಸೇತುವೆ, ರಾತ್ರಿ ವೇಳೆ ಆಕಸ್ಮಿಕವಾಗಿ ಕುಸಿದು ಬಿದ್ದಿದೆ. ಈ ವೇಳೆ ಗೋವಾದಿಂದ ಹುಬ್ಬಳ್ಳಿಗೆ ತೆರಳುತ್ತಿತ್ತು ಎನ್ನಲಾದ ತಮಿಳುನಾಡು ಮೂಲದ ಲಾರಿಯೊಂದು ನದಿಯಲ್ಲಿ ಬಿದ್ದಿದೆ.
ಚಾಲಕ, ಲಾರಿಯ ಕ್ಯಾಬಿನ್ ಏರಿ ನಿಂತು ತನ್ನ ರಕ್ಷಣೆಗಾಗಿ ಜೋರಾಗಿ ಕೂಗಿಕೊಂಡಿದ್ದು, ಅದನ್ನು ಕೇಳಿದ ಸ್ಥಳೀಯ ಮೀನುಗಾರರು ಕರಾವಳಿ ಕಾವಲು ಪಡೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ತಕ್ಷಣ ಸ್ಥಳಕ್ಕೆ ಆಗಮಿಸಿದ ಕರಾವಳಿ ಕಾವಲುಪಡೆ ಸಿಬ್ಬಂದಿಗಳು ಸ್ಥಳೀಯ ಮೀನುಗಾರರ ಸಹಾಯದೊಂದಿಗೆ ಲಾರಿಯಲ್ಲಿದ್ದ ಚಾಲಕನನ್ನು ರಕ್ಷಣೆ ಮಾಡಿದ್ದಾರೆ.
ಕಾಳಿ ನದಿಯ ಹಳೆ ಸೇತುವೆ ಇದಾಗಿದ್ದು ಸುಮಾರು ಮೂರು ಕಡೆ ಕುಸಿದಿದೆ. ಇದರಿಂದ ಸಂಚಾರದ ಮೇಲೂ ವ್ಯತ್ಯಯವಾಗಲಿದ್ದು, ಗೋವಾ -ಕಾರವಾರ ಮಾರ್ಗದ ಎರಡು ಭಾಗದ ಸಂಚಾರ ವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಜಿಲ್ಲಾಧಿಕಾರಿ ಲಕ್ಷೀಪ್ರಿಯಾ, ಸ್ಥಳೀಯ ಶಾಸಕ ಸತೀಶ್ ಸೈಲ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ, ನಂತರ ಆಸ್ಪತ್ರೆಗೆ ತೆರಳಿ ಗಾಯಾಳು ಚಾಲಕನ ಆರೋಗ್ಯ ವಿಚಾರಿಸಿ ಘಟನೆ ಕುರಿತಂತೆ ಪ್ರತ್ಯಕ್ಷದರ್ಶಿ ಬಳಿ ಮಾಹಿತಿ ಪಡೆದುಕೊಂಡರು.
ಎಸ್ಪಿ ನಾರಾಯಣ ಎಂ ,ಅಗ್ನಿಶಾಮಕ ದಳ,ಕರಾವಳಿ ಕಾವಲು ಪಡೆ, ಅರಣ್ಯ ಇಲಾಖೆ ಮತ್ತಿತರ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿದ್ದು,ಯ ಈ ಅವಘಡದಲ್ಲಿ ಇತರಾರಾದರೂ ಸಿಲುಕಿರಬಹುದೇ ಎಂದು ಶೋಧ ಕಾರ್ಯ ಮುಂದುವರೆಸಿದ್ದರು.
ಸೇತುವೆ ಕುಸಿತ ರಾತ್ರಿ ವೇಳೆಯಾದ್ದರಿಂದ, ವಾಹನ ಸಂಚಾರಗಳ ಹೋರಾಟ ಕಡಿಮೆ ಇದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಹಾಗೂ ಹೆಚ್ಚಿನ ಹಾನಿ ಸಂಭವಿಸಿಲ್ಲ ಎನ್ನಲಾಗಿದೆ.