ಸಮಗ್ರ ನ್ಯೂಸ್: ಬಹು ದಿನಗಳ ಬೇಡಿಕೆಯಾಗಿದ್ದ, ಬೆಂಗಳೂರಿಗೆ ಮೆಟ್ರೋ ಸಿಟಿ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದೆ.
ಆದಾಯ ತೆರಿಗೆ ನಿಯಮಗಳು, 1962ರ ನಿಯಮ 2 ಎ ಅಡಿಯಲ್ಲಿ ಮೆಟ್ರೋ ನಗರಗಳು ಮತ್ತು ಇತರ ನಗರಗಳ ನಡುವೆ ವ್ಯತ್ಯಾಸವಿದೆ ಎಂದು ಹೇಳಿದರು. ಪ್ರಸ್ತುತ ದೇಶದ ನಾಲ್ಕು ಪ್ರಮುಖ ನಗರಗಳಾದ ಮುಂಬೈ, ದೆಹಲಿ, ಕೋಲ್ಕತಾ ಮತ್ತು ಚೆನ್ನೈಯನ್ನು ಮೆಟ್ರೋ ಸಿಟಿ ಎಂದು ಗುರುತಿಸಲಾಗುತ್ತಿದೆ
ಮೆಟ್ರೋ ಸ್ಥಾನಮಾನ ದೊರೆತರಿಗೆ ಆ ನಗರಕ್ಕೆ ಮನೆ ಬಾಡಿಗೆ ಭತ್ಯೆ ತೆರಿಗೆ ವಿನಾಯಿತಿ ಸೇರಿದಂತೆ ಕೆಲವೊಂದು ಅನುಕೂಲಗಳು ಲಭಿಸುತ್ತವೆ. ಅಸ್ತಿತ್ವದಲ್ಲಿರುವ ಮೆಟ್ರೋ ನಗರಗಳಲ್ಲಿ ಸೆಕ್ಷನ್ 10 (13 ಎ) ಅಡಿಯಲ್ಲಿ ವಿನಾಯಿತಿ ಮಿತಿಗಳನ್ನು ಲೆಕ್ಕಹಾಕಲು ವೇತನದ ಶೇ. 50ರಷ್ಟನ್ನು ಪರಿಗಣಿಸಲಾಗುತ್ತದೆ. ಅಂದರೆ ಮೆಟ್ರೋ ನಗರಗಳಲ್ಲಿ ಮೂಲ ವೇತನದ ಶೇ. 50ರಷ್ಟನ್ನು ಮನೆ ಬಾಡಿಗೆ ಭತ್ಯೆ ತೆರಿಗೆ ವಿನಾಯಿತಿ ಪಡೆಯಬಹುದು. ಆದರೆ ಮೆಟ್ರೋಯೇತರ ನಗರಗಳ ನಿವಾಸಿಗಳು ತಮ್ಮ ಮೂಲ ವೇತನದ ಶೇ. 40ರಷ್ಟನ್ನು ಮಾತ್ರವೇ ಎಚ್‌ಆರ್‌ಎ ತೆರಿಗೆ ವಿನಾಯಿತಿ ಎಂದು ಕೈಮ್ ಮಾಡಲು ಸಾಧ್ಯ.ಅಸ್ತಿತ್ವದಲ್ಲಿರುವ ನೀತಿಯನ್ನು ಬದಲಾಯಿಸುವ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದು ಪಂಕಜ್ ಚೌಧರಿ ಹೇಳಿದರು.