Ad Widget .

ಉಪ್ಪಿನಂಗಡಿ: ಟಿಕೆಟ್ ವಿಚಾರಕ್ಕೆ ನಿರ್ವಾಹಕನಿಗೆ ಪರಚಿದ ಪ್ರಯಾಣಿಕ| ಠಾಣೆಯಲ್ಲಿ ಪ್ರಕರಣ ಇತ್ಯರ್ಥ

ಸಮಗ್ರ ನ್ಯೂಸ್: ಟಿಕೆಟ್ ವಿಚಾರಕ್ಕೆ ಪ್ರಯಾಣಿಕನೊಬ್ಬ ಕಂಡೆಕ್ಟರ್ ಮೇಲೆ ಹಲ್ಲೆ ಮಾಡಿರುವ ಘಟನೆ ಉಪ್ಪಿನಂಗಡಿಯಿಂದ ಸುಬ್ರಹ್ಮಣ್ಯಕ್ಕೆ ಹೋಗುವ ಬಸ್ ನಲ್ಲಿ ಮಂಗಳವಾರ ಸಂಜೆ ನಡೆದಿದೆ.

Ad Widget . Ad Widget .

ಉಪ್ಪಿನಂಗಡಿಯಿಂದ ಸುಬ್ರಹ್ಮಣ್ಯಕ್ಕೆ ಹೋಗುವ ಬಸ್ ನಲ್ಲಿ ವಿಪರೀತ ಪ್ರಯಾಣಿಕರು, ಶಾಲಾ ಮಕ್ಕಳು ತುಂಬಿ ತುಳುಕುತ್ತಿದ್ದರು. ಈ ವೇಳೆ ಕೆಮ್ಮಾರ ಬಳಿ ತಲುಪುತ್ತಿದ್ದಂತೆ ಪ್ರಯಾಣಿಕನೊಬ್ಬನಲ್ಲಿ ಕಂಡಕ್ಟರ್ ರಫೀಕ್ ಅವರು ಟಿಕೇಟ್ ಕೇಳಿದ್ದಾರೆ. ಬಳಿಕ ಈತ ಚಿಲ್ಲರೆ ವಿಚಾರದಲ್ಲಿ ತಗಾದೆ ತೆಗೆದಿದ್ದಾನೆ ಎನ್ನಲಾಗಿದೆ.

Ad Widget . Ad Widget .

ಪ್ರಯಾಣಿಕ ಜಗಳ ಮಾಡಿದ್ದಲ್ಲದೇ ಬಸ್ ನಲ್ಲಿ ರಂಪಾಟವಾಡಿ ಬಸ್ ಕಿಟಕಿಗೆ ಹಾನಿ ಮಾಡಿದ್ದಾನೆ, ಹಾನಿಗೈದಿದಲ್ಲದೆ ಬಸ್ ಕಂಡಕ್ಟರ್ ರಫೀಕ್ ಅವರ ಕುತ್ತಿಗೆ ಭಾಗ ಹಾಗೂ ಕೈಗೆ ಪರಚಿ ಗಾಯಗೊಳಿಸಿದ್ದಾನೆ. ಈ ಬಗ್ಗೆ ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು ಈ ಹಿನ್ನೆಲೆಯಲ್ಲಿ ಬಸ್ ಸಹಿತ ರಂಪಾಟ ನಡೆಸಿದ ಪ್ರಯಾಣಿಕನನ್ನು ಠಾಣೆಗೆ ಕರೆದುಕೊಂಡು ಬಂದಿದ್ದಾರೆ.

ರಂಪಾಟ ಮಾಡಿದ ಪ್ರಯಾಣಿಕ ಮದ್ಯದ ನಶೆಯಲ್ಲಿದ್ದ ಎನ್ನಲಾಗಿದ್ದು ಪೊಲೀಸರು ಆತನಿಗೆ ಎಚ್ಚರಿಕೆ ನೀಡಿರುವುದಾಗಿ ತಿಳಿದು ಬಂದಿದೆ. ಪ್ರಯಾಣಿಕನ ಅವಾಂತರದಿಂದ ಹಲವು ಪ್ರಯಾಣಿಕರು ಮತ್ತು ಶಾಲಾ ಮಕ್ಕಳು ಪರದಾಡುವಂತಾಯಿತು.

Leave a Comment

Your email address will not be published. Required fields are marked *