Ad Widget .

ಮಂಗಳೂರು: ಬಿಜೈನಿಂದ‌ ಕಾಣೆಯಾಗಿದ್ದ ಹುಡುಗಿ ಕಾರ್ಕಳದ ಯುವಕನ ಮನೆಯಲ್ಲಿ ಪತ್ತೆ| ಮಕ್ಕಳ ಕೈಗೆ ಮೊಬೈಲ್ ಕೊಟ್ರೆ‌ ಹೀಗೆಲ್ಲಾ ಆಗುತ್ತೆ ಜೋಪಾನ…

ಸಮಗ್ರ ನ್ಯೂಸ್: ಬಿಜೈನ ನಿವಾಸಿಯಾಗಿರುವ 18 ವರ್ಷದ ಯುವತಿ ಸಿಮ್ ಇಲ್ಲದ ಮೊಬೈಲ್ ನೊಂದಿಗೆ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಯುವತಿಯನ್ನು ಕಾರ್ಕಳದಲ್ಲಿ ಪತ್ತೆ ಹಚ್ಚಿದ್ದಾರೆ.

Ad Widget . Ad Widget .

ಜುಲೈ 30 ರಂದು ಯುವತಿ ಮನೆಯಿಂದ ಯಾರಿಗೂ ಹೇಳದೆ ನಾಪತ್ತೆಯಾಗಿದ್ದಳು. ಈ ವೇಳೆ ಸಿಮ್ ಇಲ್ಲದ ಮೊಬೈಲ್ ನ್ನು ತೆಗೆದುಕೊಂಡು ಹೋಗಿದ್ದಳು. ಈ ಕುರಿತಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.

Ad Widget . Ad Widget .

ತನಿಖೆ ಕೈಗೊಂಡ ಬರ್ಕೆ ಪೊಲೀಸ್ ಇನ್ಸ್ಪೆಕ್ಟರ್ ತಂಡ, CC TV ದೃಶ್ಯಾವಳಿಗಳನ್ನು ಆಧರಿಸಿ ಮತ್ತು ಕಾಣೆಯಾದ ಹುಡುಗಿ ಈ ಹಿಂದೆ social media ಬಳಸುತ್ತಿದ್ದ ಬಗ್ಗೆ ಮಾಹಿತಿ ಪಡೆದು ಸುಮಾರು 3000 instagraam account ಮತ್ತು moja App ನ account ಗಳನ್ನು ಪರಿಶೀಲಿಸಿ ಅನುಮಾನಾಸ್ಪದ ವ್ಯಕ್ತಿಗಳ ಪರಿಶೀಲನೆ ನಡೆಸಿದ್ದರು.

ಸಂದರ್ಭದಲ್ಲಿ ಸೂರಜ್ ಪೂಜಾರಿ ಎಂಬ 23 ವರ್ಷದ ಉಡುಪಿ ಜಿಲ್ಲೆ, ಕಾರ್ಕಳ ತಾಲೂಕು,ಗಜೇಂದ್ರ ಬೈಲ್ ಗ್ರಾಮದ ಹುಡುಗನೊಂದಿಗೆ ಆತನ ಮನೆಯಲ್ಲಿ ಕಾಣೆಯಾದ ಹುಡುಗಿ ಇದ್ದು, ಅವರನ್ನು ಬರ್ಕೆ ಠಾಣೆಗೆ ಕರೆತಂದು ವಿಚಾರಣೆ ಮಾಡಿದ್ದಾರೆ. ಈ ವೇಳೆ ಅವರಿಬ್ಬರು ಪ್ರೀತಿಸುತ್ತಿರುವುದಾಗಿ ತಿಳಿದು ಬಂದಿದೆ. ವಿಚಾರಣೆ ಸಂದರ್ಭದಲ್ಲಿ ಹುಡುಗಿ ಮಾನಸಿಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮರ್ಥಳಿಲ್ಲದೆ ಇರುವುದು ಕಂಡು ಬಂದಿರುತ್ತೆ. ಹುಡುಗಿಯು ತಂದೆ – ತಾಯಿ ಜೊತೆ ಹೋಗುವುದಿಲ್ಲ ವೆಂದ ಕಾರಣಕ್ಕೆ ಸ್ವಾದಾರ ಕೇಂದ್ರಕ್ಕೆ ಕಳುಹಿಸಿದ್ದಾರೆ.

Leave a Comment

Your email address will not be published. Required fields are marked *