ಮಂಗಳೂರು: ಪಬ್‌ನಲ್ಲಿ ಮಹಿಳೆಗೆ ಕಿರುಕುಳ| ಪುತ್ತೂರಿನ ನಾಲ್ಕು ಮಂದಿ ಅರೆಸ್ಟ್

ಸಮಗ್ರ ನ್ಯೂಸ್: ಮಂಗಳೂರು ನಗರದ ಪಾಂಡೇಶ್ವರದ ಪಬ್‌ ಒಂದರಲ್ಲಿ ಮಹಿಳೆಗೆ ಕಿರುಕುಳ ನೀಡಿದ ಆರೋಪದಲ್ಲಿ ಪುತ್ತೂರು ನಿವಾಸಿಗಳಾದ ಮಹೇಶ್‌ (28), ವಿನಯ್‌ (30), ನಿತೇಶ್‌ (32) ಮತ್ತು ಪ್ರಿತೇಶ್‌ (33) ಅವರನ್ನು ಪೊಲೀಸರು ಬಂಧಿಸಿದ್ದಾರೆ.

Ad Widget ... ..

ಕಳೆದ ಶನಿವಾರ ಗೆಳತಿಯರ ಜೊತೆ ಮಹಿಳೆ ಪಬ್ ಗೆ ಭೇಟಿ ನೀಡಿದ್ದರು. ಇದೇ ಪಬ್‌ಗ ಪುತ್ತೂರಿನ ಯುವಕರ ತಂಡ ಬಂದಿತ್ತು. ಈ ವೇಳೆ ತಂಡದಲ್ಲಿದ್ದ ಯುವಕನೊಬ್ಬ ಮಹಿಳೆಗೆ ಕಿರುಕುಳ ನೀಡಿದ್ದು, ಮಹಿಳೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Ad Widget

ಅನಂತರವೂ ಯುವಕರು ಮಹಿಳೆಯ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ. ಮಾಹಿತಿ ಪಡೆದ ಪಾಂಡೇಶ್ವರ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮಹಿಳೆಯ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

Leave a Comment

Your email address will not be published. Required fields are marked *