Ad Widget .

ಯಾದಗಿರಿ ಪಿಎಸ್ಐ ಸಾವು ಬೆನ್ನಲ್ಲೇ ಸಿಸಿಬಿ ಇನ್ಸ್ಪೆಕ್ಟರ್ ತಿಮ್ಮೆಗೌಡ ಆತ್ಮಹತ್ಯೆ…!

ಸಮಗ್ರ ನ್ಯೂಸ್: ಯಾದಗಿರಿಯಲ್ಲಿ ಪಿಎಸ್ಐ ಪರಶುರಾಮ್ ಸಾವಿನ ಬೆನ್ನಲ್ಲೇ ಇದೀಗ ಸಿಸಿಬಿ ಇನ್ಸ್ಪೆಕ್ಟರ್ ತಿಮ್ಮೆಗೌಡ ಆತ್ಮಹತ್ಯೆಗೆ ಶರಣಾಗಿದ್ದು ಅಚ್ಚರಿಗೆ ಕಾರಣವಾಗಿದೆ. ಸಿಸಿಬಿ ಆರ್ಥಿಕ ಅಪರಾಧ ವಿಭಾಗದ ಇನ್ಸ್ ಪೆಕ್ಟರ್ ತಿಮ್ಮೇಗೌಡ ರಾಮನಗರ ಜಿಲ್ಲೆ ಬಿಡದಿಯ ಕಗ್ಗಲಿಪುರದಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ ಈ ಆತ್ಮಹತ್ಯೆ ವೈಯಕ್ತಿಕ ಕಾರಣಕ್ಕೋ ಅಥವಾ ಕೆಲಸದ ಒತ್ತಡವೋ ಎನ್ನುವ ಅನುಮಾನ ಮೂಡಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ತಿಮ್ಮೇಗೌಡ ಸಿಸಿಬಿ ಆರ್ಥಿಕ ಅಪರಾಧ ವಿಭಾಗದ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ನಿನ್ನೆ ರಾತ್ರಿ ಕಗ್ಗಲಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ತಗಚಗುಪ್ಪೆ ಮುಖ್ಯ ರಸ್ತೆಯಲ್ಲಿರುವ ನಿರ್ಜನ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು(ಆಗಸ್ಟ್ 05) ಬೆಳಗ್ಗೆ ಸ್ಥಳೀಯರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರಿಗೆ ಇನ್ಸ್ ಪೆಕ್ಟರ್ ತಿಮ್ಮೇಗೌಡ ಅನ್ನೋದು ಗೊತ್ತಾಗಿತ್ತು. ಬಳಿಕ ಕುಟುಂಬಸ್ಥರಿಗೂ ಮಾಹಿತಿ ನೀಡಿದ್ದು, ಅವರು ಮೈಸೂರಿನಿಂದ ಸ್ಥಳಕ್ಕಾಗಮಿಸಿ ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಆರೋಪಿಸಿದ್ದಾರೆ.

Ad Widget . Ad Widget . Ad Widget .

ಸಿಸಿಬಿಯಲ್ಲಿ ಇತ್ತೀಚೆಗೆ ಹೈಪ್ರೊಫೈಲ್ ಲೈಂಗಿಕ ದೌರ್ಜನ್ಯ ಪ್ರಕರಣ ಒಂದು ದಾಖಲಾಗಿತ್ತು..ಅದರ ತನಿಕಾಧಿಕಾರಿಯಾಗಿದ್ದ ತಿಮ್ಮೇಗೌಡರಿಗೆ ಆರೋಪಿಗಳನ್ನು ಬಂಧಿಸಿದ್ದ ವಿಚಾರಕ್ಕೆ ಸಂಬಂಧ ಪಟ್ಟಂತೆ ಒತ್ತಡಗಳು ಇತ್ತು ಇದರ ಜೊತೆಗೆ 2004 ರಲ್ಲಿ ಹಾಸನದಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿದ್ದಾಗ ಈತನ ಮೇಲೆ ಒಂದು ಅತ್ಯಾಚಾರ ಪ್ರಕರಣ ಕೂಡ ದಾಖಲಾಗಿತ್ತು. ಸಂತ್ರಸ್ಥೆಗೆ ಮಗು ಕೂಡ ಜನಿಸಿದ್ದು ತಿಮ್ಮೇಗೌಡರ ಡಿಎನ್ಎ ಮ್ಯಾಚ್ ಆಗಿತ್ತು. ಆ ವಿಚಾರವಾಗಿ ಕೇಸ್ ನ್ಯಾಯಾಲಯದಲ್ಲಿ ಕಮಿಟ್ ಆಗಿದ್ದು, ಆಗಸ್ಟ್ 31 ಕ್ಕೆ ವಿಚಾರಣೆ ದಿನಾಂಕ ಕೂಡ ನಿಗದಿಯಾಗಿತ್ತು..ಈ ವಿಚಾರವಾಗಿಯು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನುವ ಮಾತು ಕೂಡ ಇದೆ.

ಇದಿಷ್ಟೇ ಅಲ್ಲ ಅತ್ತಿಬೆಲೆ ಪಟಾಕಿ ದುರಂತ ಸಂಭವಿಸಿದಾಗ ಅತ್ತಿಬೆಲೆ ಠಾಣೆ ಇನ್ಸ್ ಪೆಕ್ಟರ್ ಆಗಿದ್ದಿದ್ದು ಕೂಡ ಇದೇ ತಿಮ್ಮೇಗೌಡ. ಆ ಸಂದರ್ಭದಲ್ಲಿಯೂ ತಿಮ್ಮೇಗೌಡ ಅಮಾನತ್ತು ಆಗಿದ್ದರು. ಹೀಗೆ ತಿಮ್ಮೇಗೌಡ ಸಾವಿನ ಹಿಂದೆ ಸಾಲು ಸಾಲು ವೈಯಕ್ತಿಕ ಕಾರಣ ಸೇರಿದಂತೆ ಕೆಲಸದ ಒತ್ತಡದ ಮಾತು ಕೂಡ ಕೇಳಿ ಬರುತ್ತಿವೆ.

ಸದ್ಯ ಕೆಂಗೇರಿಯ ಆರ್ ಆರ್.ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹ ಮೈಸೂರಿನ ನಿವಾಸಕ್ಕೆ ಕೊಂಡೊಯ್ಯಲಾಗಿದ್ದು, ನಾಳೆ ಹುಟ್ಟೂರು ಚನ್ನಪಟ್ಟಣದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಸದ್ಯ ಪತ್ನಿ ಸುನಿತಾ ನೀಡಿದ ದೂರಿನ ಆಧಾರದ ಮೇಲೆ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ  ನಡೆಯುತ್ತಿದೆ.

Leave a Comment

Your email address will not be published. Required fields are marked *