ಬೆಂಗಳೂರಿನಲ್ಲಿ ವರುಣನ ಆರ್ಭಟ: ವಾಹನ ಸವಾರರ ಪರದಾಟ

ಸಮಗ್ರ ನ್ಯೂಸ್: ಜಿಲ್ಲೆಯಾದ್ಯಂತ ಮಳೆ ಧಾರಾಕಾರವಾಗಿ ಸುರಿಯುತ್ತಿದ್ದು ಬೆಂಗಳೂರಿನಲ್ಲಿ ಮಾತ್ರ ಮೋಡ ಕವಿದ ವಾತಾವರಣ ಇರುತ್ತಿತ್ತು. ಅದರಂತೆ ಇಂದು ಮೊದಲ ಶ್ರಾವಣ ಸೋಮವಾರ, ಸಂಜೆಯಿಂದ ಬೆಂಗಳೂರಿನಲ್ಲಿ ವರುಣನ ಆರ್ಭಟ ಜೋರಾಗಿದೆ. ನಗರದೆಲ್ಲೆಡೆ ಮಳೆ ಬಂದು ಟ್ರಾಫಿಕ್ ಸಮಸ್ಯೆಯಿಂದ ವಾಹನ ಸವಾರರು ಪರದಾಡುವಂತಾಯಿತು.

Ad Widget ... ..

ಕತ್ರಿಗುಪ್ಪೆ, ಉತ್ತರಹಳ್ಳಿ, ಶಾಂತಿನಗರ, ರಿಚ್ಮಂಡ್ ಟೌನ್, ಹೆಚ್ಎಎಲ್, ದೊಡ್ಡ ನಕ್ಕುಂದಿ ಮಾರತಹಳ್ಳಿ, ಕುಂದ್ಲಹಳ್ಳಿ, ಇಂದಿರಾನಗರ, ಮುರುಗೇಶ್ ಪಾಳ್ಯ, ಸಿವಿ ರಾಮನ್ ನಗರ, ಈಜಿಪುರ, ದೊಮ್ಮಲೂರು, ಶಾಂತಿ ನಗರ, ಜಯನಗರ, ವಿಜಯನಗರ, ಮೆಜೆಸ್ಟಿಕ್, ಸಿಟಿ ಮಾರ್ಕೆಟ್, ಬನಶಂಕರಿ, ಸುಬ್ರಹ್ಮಣ್ಯಪುರ, ಕೆಂಗೇರಿ , ಶೇಷಾದ್ರಿಪುರಂ ಸೇರಿದಂತೆ ಹಲವೆಡೆ ಧಾರಾಕಾರ ಮಳೆ ಸುರಿಯುತ್ತಿದೆ.

Ad Widget

ಕರಾವಳಿ ಸಮುದ್ರ ತೀರದಲ್ಲಿ ಗಾಳಿ ಪರಿವರ್ತನೆ ಹಿನ್ನಲೆ ಆಗಸ್ಟ್ 6ರ ವರೆಗೆ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ವ್ಯಾಪಕ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Leave a Comment

Your email address will not be published. Required fields are marked *