ಉಡುಪಿ: ಮತ್ತೊಮ್ಮೆ ಮಾನವೀಯತೆ ಮೆರೆದ ಕರಾವಳಿ ಬಸ್ ಡ್ರೈವರ್| ಅಸೌಖ್ಯಕ್ಕೊಳಗಾದ ಯುವತಿಯ ಚಿಕಿತ್ಸೆಗೆ ಆಸ್ಪತ್ರೆಯೊಳಗೆ ಬಸ್ ಚಲಾಯಿಸಿದ ಚಾಲಕ

ಸಮಗ್ರ ನ್ಯೂಸ್: ಮಂಗಳೂರಿನಲ್ಲಿ ಯುವತಿಯೋರ್ವಳು ಬಸ್ಸಿನಲ್ಲಿಯೇ ಅಸ್ವಸ್ಥಗೊಂಡಿದ್ದಾಗ ಬಸ್ಸನ್ನೇ ಅಂಬುಲೆನ್ಸ್‌ ಮಾದರಿಯಲ್ಲಿ ಚಾಲಕ, ನಿರ್ವಾಹಕರು ಆಸ್ಪತ್ರೆಗೆ ಸಾಗಿಸುವಲ್ಲಿ ಮಾನವೀಯತೆ ಮೆರೆದ ಘಟನೆ ಮಾಸುವ ಮೊದಲೇ ಉಡುಪಿಯಲ್ಲಿಯೂ ಇಂತಹುದೇ ಘಟನೆ (ಇಂದು 5 ಆಗಸ್ಟ್)‌ ಸೋಮವಾರ ಬೆಳಿಗ್ಗೆ ಘಟಿಸಿದೆ.

Ad Widget ... ..

ಶಿರ್ವ ದಿಂದ ಉಡುಪಿಗೆ ಬರುತ್ತಿದ್ದ ನವೀನ್ ಎಂಬ ಬಸ್‌ನಲ್ಲಿ ಯುವತಿಯೋರ್ವಳು ವಾಂತಿ ಮಾಡಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾಳೆ. ತುರ್ತಾಗಿ ಸ್ಪಂಧಿಸಿದ ನವೀನ್ ಬಸ್ ನ ಚಾಲಕ ಶಶಿಕಾಂತ್, ನಿರ್ವಾಹಕ ಸಲೀಂರವರು ಅಸ್ವಸ್ಥ ಗೊಂಡ ಯುವತಿಯ ಚಿಕಿತ್ಸೆಗಾಗಿ ತಕ್ಷಣವೇ ಬಸ್ಸನ್ನು ಟಿಎಂಎ ಪೈ ನೇರವಾಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ಬಸ್ ಚಾಲನೆ ಮಾಡಿ, ತುರ್ತು ನಿಗಾ ಘಟಕಕ್ಕೆ ಸಾಗಿಸಿ ಮಾನವೀತೆ ಮೆರೆದಿದ್ದಾರೆ.

Ad Widget

ಯುವತಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ ಎಂದು ತಿಳಿದು ಬಂದಿದೆ. ಚಾಲಕ ಶಶಿಕಾಂತ್, ನಿರ್ವಾಹಕ ಸಲೀಂರವರ ಈ ಕೆಲಸಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Leave a Comment

Your email address will not be published. Required fields are marked *