ಸಮಗ್ರ ನ್ಯೂಸ್: ಪ್ರತಿಭಟನಾಕಾರರು ಮತ್ತು ಆಡಳಿತಾರೂಢ ಅವಾಮಿ ಲೀಗ್ ಬೆಂಬಲಿಗರ ನಡುವೆ ನಡೆಯುತ್ತಿರುವ ಸಂಘರ್ಷದಿಂದ ಭುಗಿಲಿದ್ದಿರುವ ಹಿಂಸಾಚಾರ ನೂರಾರು ಮಂದಿಯನ್ನು ಬಲಿ ಪಡೆದಿರುವ ಬೆನ್ನಲ್ಲೆ ಇಂದು ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸೀನಾ ರಾಜಿನಾಮೆ ನೀಡಿದ್ದಾರೆ ಎಂದು thehindu.com ವರದಿ ಮಾಡಿದೆ.
ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಉದ್ನಿಗ್ನತೆ ನಡುವೆ ಪ್ರಧಾನಿ ಶೇಖ್ ಹಸೀನಾ ಅವರು ‘ಸುರಕ್ಷಿತ ಸ್ಥಳ’ಕ್ಕಾಗಿ ಢಾಕಾ ಅರಮನೆ ತೊರೆದಿದ್ದಾರೆ ಎಂದು ಅವರ ನಿಕಟ ಮೂಲವೊಂದು ತಿಳಿಸಿದೆ. ಹಸೀನಾ ಆಡಳಿತದ ಮೇಲೆ ಹೆಚ್ಚುತ್ತಿರುವ ಅಶಾಂತಿ ಮತ್ತು ಒತ್ತಡದ ಮಧ್ಯೆ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಶೇಕ್ ಹಸೀನಾ ರಾಜೀನಾಮೆ ನೀಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಶೇಖ್ ಹಸೀನಾ ಅವರ ಹಿರಿಯ ಸಲಹೆಗಾರರೊಬ್ಬರು ಸೋಮವಾರ ಎಎಫ್‌ಪಿಗೆ ತಿಳಿಸಿದ್ದಾರೆ. “ಪರಿಸ್ಥಿತಿ ಹೀಗಿದೆ. ಆದರೆ ಅದು ಹೇಗೆ ಸಂಭವಿಸುತ್ತದೆ ಎಂದು ನನಗೆ ತಿಳಿದಿಲ್ಲ” ಎಂದು ಹೆಸರು ಹೇಳಲು ಇಚ್ಚಿಸದ ಪ್ರಧಾನಿ ಅವರ ಹಿರಿಯ ಸಲಹೆಗಾರರೊಬ್ಬರು ಹೇಳಿದ್ದಾರೆ.